Belagavi

ಸವದತ್ತಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಆಂಬುಲೆನ್ಸ್ ವಿತರಿಸಿದ ಶಾಸಕ ಆನಂದ ಚಂ. ಮಾಮನಿ


ಸವದತ್ತಿ: ಆನಂದ ಚಂ ಮಾಮನಿ ಉಪ ಸಭಾಧ್ಯಕ್ಷರು ಕರ್ನಾಟಕ ವಿಧಾನಸಭಾ ಇವರು ತಾಲೂಕು ಸಾರ್ವಜನಿಕ ಆಸ್ಪತ್ರೆ ಸವದತ್ತಿ, ಆಂಬುಲೆನ್ಸ್ ಗಳನ್ನು ವಿತರಿಸಿದರು.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ಸನ್ಮಾನ್ಯ ಆನಂದ ಚಂ ಮಾಮನಿ ಉಪಸಭಾಧ್ಯಕ್ಷರು ವಿಧಾನಸಭೆ ಇವರು ಯಲ್ಲಮ್ಮ ಗುಡ್ಡದ ರೇಣುಕಾ ಯಲ್ಲಮ್ಮನ ಆಶೀರ್ವಾದದೊಂದಿಗೆ ಇವರು ಸಮುದಾಯ ಆರೋಗ್ಯ ಯರಗಟ್ಟಿಗೆ ಒಂದು ಆಂಬುಲೆನ್ಸ್ , ಪ್ರಾಥಮಿಕ ಆರೋಗ್ಯ ಕೇಂದ್ರ ಮುನವಳ್ಳಿಗೆ ಒಂದು ಆಂಬುಲೆನ್ಸ್ ,ತಾಲೂಕು ಸಾರ್ವಜನಿಕ ಆಸ್ಪತ್ರೆ ಸವದತ್ತಿಗೆ ಒಂದು ಆಂಬುಲೆನ್ಸ್ ಹೋಬಳಿಗೆ ಒಂದರಂತೆ ಒಟ್ಟು ಮೂರು ಆಂಬುಲೆನ್ಸ್ ವಾಹನಗಳನ್ನು ಪೂಜೆ ಮಾಡುವುದರೊಂದಿಗೆ ಕ್ಷೇತ್ರದ ಜನರ ಸೇವೆಗಾಗಿ ಆಂಬುಲೆನ್ಸ್ ನೀಡಿದರು.

ಆನಂದ ಚಂ ಮಾಮನಿ ಉಪಸಭಾಧ್ಯಕ್ಷರು ಕರ್ನಾಟಕ ವಿಧಾನಸಭಾ ಸವದತ್ತಿ ಯಲ್ಲಮ್ಮವಿಧಾನಸಭಾ ಕ್ಷೇತ್ರ ಇವರಿಂದ 2020 -21 ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಮೂರು ಆಂಬುಲೆನ್ಸ್ ವಾಹನವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆ ಸವದತ್ತಿ, ಸಮುದಾಯ ಆರೋಗ್ಯ ಕೇಂದ್ರ ಯರಗಟ್ಟಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮುನವಳ್ಳಿ , ಕೋವಿಡ್ 19 ಸಂತ್ರಸ್ತರಿಗೆ ಉಚಿತವಾಗಿ ಜನರ ಸೇವೆಗಾಗಿ ಮೂರು ಆಂಬುಲೆನ್ಸ್ ಗಳನ್ನು ನೀಡಿದರು.

ಸವದತ್ತಿ : 16 ತಿಂಗಳಗಳಿಂದ ಜಗತ್ತನ್ನು ಕಾಡುತ್ತಿರುವ ಕರೋನಾ ಮಾಹಾಮಾರಿ ಹೊಡೆತಕ್ಕೆ ಕ್ಷೇತ್ರದ ಜನತೆ ಯಾವುದೇ ತೊಂದರೆಗೆ ಸಿಲುಕಬಾರದು ಮತ್ತು ಜನರ ಸಹಾಯಕ್ಕೆ ಅಂಬ್ಯುಲೆನ್ಸ್‌ಗಳನ್ನು ತುರ್ತು ಸಂದರ್ಭಗಳಲ್ಲಿ ಉಪಯೋಗಿಸಿಕೊಂಡು ಅಮೂಲ್ಯ ಜೀವ ಉಳಿಸಿಕೊಳ್ಳಬೇಕು ಎಂದು ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಹೇಳಿದರು.

ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ತಾಲೂಕಿನ ದೇವಸ್ಥಾನಗಳ ಅರ್ಚಕರಿಗೆ ಆಹಾರದ ಕಿಟ್ ಮತ್ತು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಅನುದಾನದಡಿ 44 ಲಕ್ಷ ರೂ ವೆಚ್ಚದಲ್ಲಿ ಯರಗಟ್ಟಿ, ಮುನವಳ್ಳಿ, ಸವದತ್ತಿ ಸರ್ಕಾರಿ ಆಸ್ಪತ್ರೆಗಳಿಗೆ 3 ಅಂಬ್ಯುಲೆನ್ಸ್ ವಾಹನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸರ್ಕಾರ ಬಡವರ ಜತೆಗಿದ್ದು ಯಾವುದೇ ಬಡ ಕುಟುಂಬಗಳು ಹಸಿವಿನಿಂದ ಮಲಗಬಾರದು ಎಂದು ಪ್ರತಿ ತಿಂಗಳು ಉಚಿತ ಪಡಿತರವನ್ನು ದೀಪಾವಳಿವರೆಗೂ ದೊರೆಯಲಿದೆ. ದುಡಿಯುವ ಕೈಗಳಿಗೆ ರಾಷ್ಟ್ರೀಯ ಉದ್ಯೋಗ ಕಾತ್ರಿ ಯೋಜನೆ ಅಡಿ ಪ್ರತಿಯೊಬ್ಬರಿಗೆ ಕೆಲಸ ನೀಡಿದೆ.

ಕೋವಿಡ್-19 ಮೂರನೆ ಅಲೆಯಲ್ಲಿ ಮಕ್ಕಳಿಗೆ ಹಾನಿಯಾಗದಂತೆ ಲಸಿಕೆ ತಯಾರು ಆಗುತ್ತಿದ್ದು ಜನರು ಆತಂಕ ಪಡುವ ಅಗತ್ಯವಿಲ್ಲ, ಕರೋನಾ ತೊಲಗಿಸಲು ಪ್ರತಿಯೊಬ್ಬರು ಭಯ ಪಡದೆ ಲಸಿಕೆ ಹಾಕಿಸಿಕೊಳ್ಳಿ, 18 ವರ್ಷ ಮೇಲ್ಪಟ್ಟವರಿಗೆ ಜೂ 21 ರಿಂದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವುದಾಗಿ ಪ್ರಧಾನ ಮಂತ್ರಿಗಳು ಘೋಷಿಸಿದ್ದು ಇದರ ಲಾಭ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ ದೇವಸ್ಥಾನ ಅರ್ಚಕರು, ಸಿಬ್ಬಂದಿ ಮತ್ತು ಜನತೆ ಧೈರ್ಯದಿಂದ ಕರೋನಾ ಸಂಕಷ್ಟದ ಸಂದರ್ಭವನ್ನು ಎದುರಿಸಿ ಜಯಿಸಿ ಕರೋನಾ ತೊಲಗಿಸಬೇಕು ಎಂದರು.

ಈ ಒಂದು ಕಾರ್ಯಕ್ರಮದಲ್ಲಿ ತಹಶೀಲ್ದಾರ ಪ್ರಶಾಂತ ಪಾಟೀಲ, ಯರಗಟ್ಟಿ ತಹಶೀಲ್ದಾರ ಮಠದ, ತಾಪಂ ಇಓ ಯಶವಂತಕುಮಾರ, ಸವದತ್ತಿ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ತಹಶೀಲ್ದಾರ ಗ್ರೇಡ್-2 ಎಮ್ ವಿ ಗುಂಡಪ್ಪಗೋಳ, ತಾಲೂಕಾ ವೈಧ್ಯಾಧಿಕಾರಿ ಮಹೇಶ ಚಿತ್ತರಗಿ, ಸಿ ಎಸ್ ಪಟ್ಟಣಶೆಟ್ಟಿ, ದೇವಸ್ಥಾನ ಅಭಿಯಂತರ ಎ ಏ ಮುಳ್ಳೂರ, ಡಿ ಆರ್ ಚವ್ಹಾಣ, ದೇವಸ್ಥಾನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿನಿ ನಾಗರತ್ನಾ ಚೋಳಿನ ಮತ್ತು ಅರವಿಂದ್ರ ಮಾಳಗೆ, ಕೊಳ್ಳಪ್ಪಗೌಡ ಗಂದಿಗವಾಡ, ಸಿಪಿಆಯ್ ಮಂಜುನಾಥ ನಡುವಿನಮನಿ, ಪಿಎಸ್‌ಆಯ್ ಶಿವಾನಂದ ಗುಡಗನಟ್ಟಿ, ಯಲ್ಲಪ್ಪ ಕಾಳಪ್ಪನವರ, ಪಂಡಿತ ಯಡೂರಯ್ಯ, ಪರಸನಗೌಡ ಕಾಳಿಂಗೌಡ, ಬಸನಗೌಡ ಶೆಟ್ಟನಗೌಡ್ರ ಅಲ್ಲಮಪ್ರಭು ಪ್ರಭುನ್ನವರ ಮತ್ತು  ತಾಲೂಕಾ ಅಧಿಕಾರಿಗಳು ಅರ್ಚಕರು ಇತರರು ಇದ್ದರು.

(ವರದಿ : ಈರಣ್ಣಾ ಹುಲ್ಲೂರ ಸವದತ್ತಿ)


Leave a Reply