Belagavi

ಪಿಗ್ಮಿ ಸಂಗ್ರಹಕಾರರ ನೋವಿಗೆ ಸ್ಪಂದಸಿದ ವಿಶ್ವಾಸ ವೈದ್ಯ


ಯರಗಟ್ಟಿ : ಸಮೀಪದ ಮುನವಳ್ಳಿಯ ಸಹಕಾರಿ ಸಂಘ, ಕೋ-ಆಪ್ ಕ್ರೆಡಿಟ್ ಹಾಗೂ ವಿವಿಧ ಉದ್ದೇಶಗಳ ಸಹಕಾರಿ ಸಂಘಗಳಲ್ಲಿ ಪಿಗ್ಮಿ ಸಂಗ್ರಹಕಾರರಾಗಿ ಯಾವುದೇ ಸೇವಾ ಭದ್ರತೆ ಇಲ್ಲದೇ ಬರೀ ಕಮೀಷನ್ ಮೇಲೆ ದಿನಗೂಲಿ ನೌಕರರ ಬಾಳು ಗೋಳಿನ ಕಥೆ ಕೇಳುವವರಾರು.

ಅನೇಕ ಸಂಘ ಸಂಸ್ಥೆಗಳು ಪಿಗ್ಮಿ ಸಂಗ್ರಹಕಾರ ನೇಮಕ ಮಾಡಿಕೂಂಡು ಅವರಿಗೆ ದಿನದಲ್ಲಿ ಅವರು ಸಂಗ್ರಹಿಸಿದ ಹಣದ ಆಧಾರದಿಂದ ಅವರಿಗೆ 100ರೂಪಾಯಿಗಳಿಗೆ 3ರೂಪಾಯಿ ಕಮೀಷನ್ ನೀಡುತ್ತಾ ಬಂದಿರುವ ಸಂಗತಿ ತಿಳಿದಿದೆ, ಅವರೆಲ್ಲ ಮಳೆ ಚಳಿಯೆನ್ನದೇ ಹಗಲಿರುಳು ಯಾವುದೇ ರಜೆ ಇಲ್ಲದೆ ಕಮೀಷನ್ ಮೇಲೆ ದಿನಗೂಲಿ ನೌಕರರಾಗಿ ಸೇವೆ ಮಾಡುತ್ತ ಬಂದಿರುತ್ತಾರೆ.

ಇಂತಹ ಪರಿಸ್ಥಿತಿಯಲ್ಲಿ ಬದುಕು ಸಾಗಿಸುವ ಪಿಗ್ಮಿ ಸಂಗ್ರಹಕಾರರು ಈ ಲಾಕ್ ಡೌನ್ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ದ ಸಂದರ್ಭದಲ್ಲಿ ಇವರ ಯಾವುದೇ ಪಿಗ್ಮಿ ಸಂಗ್ರಹವಾಗದೇ ಮನೆಯಲ್ಲಿ ಕೈ ಚೆಲ್ಲಿ ಕುಟುಂಬ ನಿರ್ವಹಣೆ ಮಾಡಲು ತುಂಬಾ ಕಷ್ಟವಾಗುತ್ತಿದೆ, ಇದನ್ನು ಅರಿತ ಕಾಂಗ್ರೆಸ್ ಮುಖಂಡ ರಾದ ಶ್ರೀ ವಿಶ್ವಾಸ ವೈದ್ಯ ರವರು ತಮ್ಮ ಅಭಿಮಾನಿ ಬಳಗ ದವರ ಜೊತೆಗೆ ಮುನವಳ್ಳಿಯ ಪಿಗ್ಮಿ ಸಂಗ್ರಹಕಾರರಿಗೆ ರೇಶನ ಕಿಟ್ ಕೊಡುವುದರ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಚೇತನ ಕಾಮನ್ನವರ, ಚೇತನ ಚಿಕ್ಕುಂಬಿ, ಪ್ರಸಾದ ಹೀರೇಮಠ, ಮಲ್ಲಿಕಾರ್ಜುನ ಕಾಮನ್ನವರ, ಆನಂದ ಬಸಿಡೋಣಿ, ಈರಣ್ಣ ಬೇವಿನಗಿಡದ, ಸೋಮು ಕಡಕೋಳ ಉಪಸ್ಥಿತಿತರಿದ್ದರು.

(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply