Belagavi

ಯರಗಟ್ಟಿ ಸರ್ಕಾರಿ ಆಸ್ಪತ್ರೆಗೆ ಭರ್ಜರಿ ಗಿಫ್ಟ್ ಕೊಟ್ಟ ಶಾಸಕ ಆನಂದ ಮಾಮನಿ


ಯರಗಟ್ಟಿ: ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗಿರುವ ಏಕೈಕ ಸರ್ಕಾರಿ ಆಸ್ಪತ್ರೆಗೆ ಇಂದು ವಿಧಾನ ಸಭಾ ಉಪಸಭಾಧ್ಯಕ್ಷರಾಗಿ- ಶಾಸಕ ಆನಂದ ಚಂ. ಮಾಮನಿ ತಮ್ಮ ಶಾಸಕರ ಪ್ರದೇಶ ಅಭಿವೃದ್ಧಿ ಯೋಜನೆಯ ನಿಧಿಯಲ್ಲಿ ಮೂರು ಆಂಬುಲೆನ್ಸ್ ನೀಡುವ ಮೂಲಕ ಸವದತ್ತಿ ಯಲ್ಲಮ್ಮನ ಮತ ಕ್ಷೇತ್ರದ ಜನತೆಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಇನ್ನೂ ಈ ವಾಹನವನ್ನು ಸವದತ್ತಿ ರೇಣುಕಾದೇವಿ ದೇವಸ್ಥಾನ ಆವರಣದಲ್ಲಿ ಪೂಜೆ ಮಾಡಿ ತಾವೇ ಚಲಾಯಿಸುವ ಮೂಲಕ ಲೋಕಾರ್ಪಣೆ ಗೊಳಿಸಿ ನಂತರ ಮಾತನಾಡಿದ ಶಾಸಕ ಆನಂದ ಚಂ. ಮಾಮನಿ ಮಾತನಾಡಿ ಆಂಬುಲೆನ್ಸ್ ಕೊರತೆಯಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗುವ ಹಿನ್ನೆಲೆಯಲ್ಲಿ ಈ ವಾಹನವನ್ನು ನೀಡಿದ್ದು ಇದನ್ನು ಸಮರ್ಪಕವಾಗಿ ಬಳಸಿ ಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಮಾನ್ಯ ವಿಧಾನಸಭೆ ಉಪಸಭಾಪತಿಗಳು ಜನಪ್ರಿಯ ಶಾಸಕರಾದ ಶ್ರೀ ಆನಂದ ಚ ಮಾಮನಿಯವರು, ಆಶಾ ಕಾರ್ಯಕರ್ತೆಯರಿಗೆ N 95 ಮಾಸ್ಕ್ ಗಳನ್ನು ಮತ್ತು ಯರಗಟ್ಟಿ ಸ್ಥಳೀಯ ದೇವಸ್ಥಾನದ ಅರ್ಚಕರಿಗೆ ಹಾಗೂ ಬಡವರಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸವದತ್ತಿ ತಹಶೀಲ್ದಾರ ಪ್ರಶಾಂತ ಪಾಟೀಲ, ಯರಗಟ್ಟಿ ತಹಶೀಲ್ದಾರ ಎಮ್ ಎನ್ ಮಠದ ತಾಲೂಕಾ ಆರೋಗ್ಯ ಅಧಿಕಾರಿ ಮಹೇಶ ಚಿತ್ತರಗಿ, ಸವದತ್ತಿ ಗ್ರೇಡ್2 ತಹಶೀಲ್ದಾರ ಎಮ್ ವಿ ಗುಂಡಪ್ಪಗೊಳ, ಯರಗಟ್ಟಿ ಗ್ರೇಡ್2 ತಹಶೀಲ್ದಾರ ಎನ್ ಮಂಜುನಾಥ ಸ್ವಾಮಿ, ಕಂದಾಯ ನಿರೀಕ್ಷಕರಾದ ವಾಯ್ ಎಫ್ ಮೂರ್ತನ್ನವರ, ಗ್ರಾಮ ಲೇಕ್ಕಾಧಿಕಾರಿಗಳಾದ ಎಲ್ ಬಿ ದಳವಾಯಿ, ಎ ಬಿ ಹುಣಶ್ಯಾಳ, ಯರಗಟ್ಟಿ ನಿಲಯ ಪಾಲಕರಾದ ಆಶಾ ಪರೀಟ, ಜಿಲ್ಲಾ ಪಂಚಾಯತ ಸದಸ್ಯರಾದ ಅಜೀತಕುಮಾರ ದೇಸಾಯಿ, ಡಾ : ಬಿ ಎಸ್ ಬಳ್ಳೂರ, ಡಾ : ಸ್ವರೂಪಾ ಬಿರಾದಾರ, ಡಾ : ಮಡಿವಾಳೇಶ ಎಂ, ಮಹಾಂತೇಶ ಕತ್ತಿ, ಐ ಆರ್ ಗಂಜಿ, ಎಂ ಟಿ ಕುಂಬಾರ, ಎಂ ಬಿ ಹಿರೇಮಠ ಸ್ಥಳೀಯರಾದ ರಾಜೇಂದ್ರ ವಾಲಿ, ಎಮ್ ಎಫ್ ಮದ್ದಾನಿ, ತಾಲೂಕಾ ಭಾ ಜ ಪ ಅಧ್ಯಕ್ಷರಾದ ಈರಣ್ಣಾ ಚಂದರಗಿ, ವೆಂಕಟೇಶ ದೇವರಡ್ಡಿ, ಯರಗಟ್ಟಿ ಶಕ್ತಿ ಕೇಂದ್ರ ಅಧ್ಯಕ್ಷರಾದ ಕುಮಾರ ಜಕಾತಿ ಆಶಾ-ಅಂಗನವಾಡಿ ಕಾರ್ಯಕರ್ತೆಯರು, ವೈದ್ಯಕಿಯ ಇಲಾಖೆ ಸಿಬ್ಬಂದಿ, ಸ್ಥಳೀಯ ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply