Belagavi

ಕೊರೊನಾ ವಾರಿಯರ್ಸಗೆ ದಿನಸಿ ಕಿಟ್ ಮತ್ತು ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದ ಪಂಚನಗೌಡ ದ್ಯಾಮನಗೌಡರ 


ಯರಗಟ್ಟಿ : ಸ್ಥಳೀಯ  ಶಿರಸಂಗಿಯಲ್ಲಿ ಗೌತಮಗೌಡ ಪಂಚನಗೌಡ ದ್ಯಾಮನಗೌಡರ ಇವರು ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ,ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ, ಕೊರೋನಾ ವಾರಿಯರ್ಸಗೆ ದಿನಸಿ ಕಿಟ್ ಮತ್ತು ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದರು.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ಶಿರಸಂಗಿ ಗ್ರಾಮ ಪಂಚಾಯತಿಯಲ್ಲಿ ಗೌತಮಗೌಡ  ಪಂಚನಗೌಡ ದ್ಯಾಮನಗೌಡರ ಕೋವಿಡ್ 19 ಸಂದರ್ಭದಲ್ಲಿ ಹಗಲು ಇರುಳು ಎನ್ನದೆ ಕೆಲಸ ಮಾಡಿದಂತಹ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಕೊರೊನಾ ವಾರಿಯರ್ಸಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ದಿನಸಿ ಕೆಟ್ಟ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಿ ಮಾನವೀಯತೆ ಮೆರೆದರು.

ಈ ಒಂದು ಕಾರ್ಯಕ್ರಮದಲ್ಲಿ ಪಂಚನಗೌಡ ದ್ಯಾಮನಗೌಡರ ಅಭಿಮಾನಿ ಬಳಗ ಮತ್ತು ಶಿರಸಂಗಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
(ವರದಿ: ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply