Belagavi

ಜೂನ್ 14ರ ನಂತರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡುವಂತೆ ಸಂಸದರಿಗೆ ಮನವಿ


ಬೆಳಗಾವಿ : ಜೂನ್ 14ರ ಬಳಿಕ ವಿನಾಯಿತಿ ನೀಡಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿ ಕೊಡುವಂತೆ ಸ್ಥಳೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷರಾದ ಪಂಚಾಕ್ಷರಿ ಚೋನಾದ್ ಹಾಗೂ ಬೆಳಗಾವಿ ಕಡೇ ಬಜಾರ್ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ನೇಲ್ ಅವರು ನಿಯೋಗದೊಂದಿಗೆ ಮನವಿ ಸಲ್ಲಿಸಲಾಯಿತು.

ಗುರುವಾರ ಸಂಸದರ ಗೃಹ ಕಚೇರಿಗೆ ಭೇಟಿ ನೀಡಿ ಕೋವಿಡ್-19 ಲಾಕ್ಡೌನ್ ನಿಂದ ವ್ಯಾಪಾರ ವಹಿವಾಟಿಗೆ ಸರ್ಕಾರ ನಿರ್ಭಂದ ಹೇರಿದ್ದರಿಂದ ಅಂಗಡಿ ಮುಗ್ಗಟ್ಟು ವ್ಯಾಪಾರಸ್ಥರು ಬೀದಿಗೆ ಬೀಳುವಂತಾಗಿದೆ ಆದ್ದರಿಂದ ಬೆಳಗಾವಿ ನಗರದ ಎಲ್ಲಾ ಅಂಗಡಿ-ಮುಗ್ಗಟ್ಟು ಮತ್ತು ವ್ಯಾಪಾರ ವಹಿವಾಟು ಕೇಂದ್ರಗಳನ್ನು ಜೂನ್ 14 ರ ಬಳಿಕ ವಿನಾಯಿತಿ ನೀಡಿ, ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.

ನಿಯೋಗದ ಸದಸ್ಯರ ಮನವಿಯನ್ನು ಆಲಿಸಿದ ಸಂಸದೆ ಮಂಗಲಾ ಸುರೇಶ್ ಅಂಗಡಿ ಮಾತನಾಡಿ. ಉಪ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಗೋವಿಂದ ಕಾರಜೋಳ ಅವರ ಗಮನಕ್ಕೆ ತಂದು, ಅವರ ಜೊತೆ ಮಾತನಾಡಿ, ಈ ಬಗ್ಗೆ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಿ, ಮುಂದೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಬೆಳಗಾವಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಇದ್ದರು.

(ವರದಿ ಈರಣ್ಣಾ ಹುಲ್ಲೂರ)


Leave a Reply