Belagavi

ಸೌಹಾರ್ದ ಸಹಕಾರಿ ಸಿಬ್ಬಂದಿಗೆ ಆಹಾರ ಕಿಟ್ ವಿತರಣೆ


ಯರಗಟ್ಟಿ: ಕಳೆದ ವರ್ಷದಿಂದ ಕೋರೊನಾ ಲಾಕಡೌನದಿಂದಾಗಿ ಸಂಕಸ್ಟಕ್ಕೆ ಒಳಗಾಗಿರುವ ಸೌಹಾರ್ದ ಸಹಕಾರಿ ಸಂಘದ 4000ಕಿಂತ ಅಧಿಕ ಸಿಬಂದ್ದಿ ಹಾಗೂ ಪಿಗ್ಮಿ ಸಂಗ್ರಹಿಸುವವರಿಗೆ ಸಹಾಯರ್ತವಾಗಿ ಎಮ್ ಕೆ ಕವಟಗಿಮಠ ಚಾರಿಟೆಬಲ ಟ್ರಸ್ಟ ಚಿಕ್ಕೋಡಿ ಇವರ ವತಿಯಿಂದ ಯರಗಟ್ಟಿ ಪಟ್ಟಣದ ಶ್ರೀ ಕಟಕೋಳ ಸಿದ್ರಾಯಜ್ಜನವರ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ಯರಗಟ್ಟಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಸೌಹಾರ್ದ ಸಹಕಾರಿ ಸಂಸ್ಥೆಗಳ ಸಿಬ್ಬಂದಿ ವರ್ಗದವರಿಗೆ ಹಾಗೂ ಪಿಗ್ಮಿ ಸಂಗ್ರಹಕರಿಗೆ ಸ್ಥಳಿಯ ಶ್ರೀ ಸಾಯಿ ಕ್ರೆಡಿಟ್ ಸೌಹಾರ್ದ ಸಹಕಾರಿ ಚಿಕ್ಕೊಡಿ ಶಾಖೆಯ ಯರಗಟ್ಟಿ ಬ್ಯಾಂಕಿನ ನೇತೃತ್ವದಲ್ಲಿ ಆಹರದ ದಿನಸಿ ಕಿಟ್ಟಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಯುಕ್ತ ಸಹಕಾರಿಯ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ ಹೊಂಗಲ, ಶಶಿಕಾಂತ ಹಾದಿಮನಿ, ಗುರು ಹಿರೇಮಠ, ಯಲ್ಲಪ್ಪ ಗಾಣಿಗೇರ, ನವೀನ ರೇಣಕೆ, ಸೋಮಶೇಖರ ಚಳಕೋಪ್ಪ, ಚಿದಂಬರ ಕದಮ್, ಮಹದೇವಸಿಂಗ ರಜಪೂತ್, ರವಿ ಲಕ್ಷಟ್ಟಿ, ಸಂಭಾಜಿ ಕದಂ, ನಾಗಪ್ಪ ಕಟಗಿ, ರಮೇಶ ಹಳದಿ, ಉಮೇಶ ಯರಗಟ್ಟಿ, ಮುಂತಾದವರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply