Belagavi

ಸೇವೆಗೆ ಉಚಿತ ಆ್ಯಂಬುಲೆನ್ಸಗೆ ಚಾಲನೆ ನೀಡಿದ ವಿಧಾನ ಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ


ಯರಗಟ್ಟಿ: ಸಮೀಪದ  ಮುನವಳ್ಳಿ ಪಟ್ಟಣದ
ಸರಕಾರಿ, ಆಸ್ಪತ್ರೆಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷರಾದ ಆನಂದಮಾಮನಿಯವರುಮುನವಳ್ಳಿ ಹೋಬಳಿಗೆ ಅನುಕೂಲವಾಗುವಂತೆ ಬುಧವಾರ ಕೊವಿಡ್ ತುರ್ತು ಸೇವೆಗೆ ಉಚಿತ ಆ್ಯಂಬುಲೆನ್ಸ್ ಕೊಡಮಾಡಿದರು.

ನಂತರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್‌ನ ಸಂಕಷ್ಟ ಸಂದರ್ಭದಲ್ಲಿ ಅಲೆಮಾರಿ ಜನಾಂಗಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಆಹಾರ ಕಿಟ್‌ಗಳು, ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳ ಅರ್ಚಕರ ಕುಟುಂಬಕ್ಕೆ ಆಹಾರ ಕಿಟ್‌ಗಳನ್ನು ವಿತರಿಸಲಾ ಗುತ್ತಿದೆ, ಮುನವಳ್ಳಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆ ಗೇರಿಸಿ 30 ಬೆಡ್‌ಗಳ ಆಸ್ಪತ್ರೆಯನ್ನಾಗಿ ಮಾಡಬೇಕೆಂದು ಮುಖ್ಯಮಂತ್ರಿಗಳೊಂದಿಗೆ ಜರುಗಿದ ವಿಡಿಯೋ ಕಾನ್ಸರೆನ್ ದಲ್ಲಿ ಹಾಗೂ ಬೆಳಗಾವಿಗೆಭೇಟಿನೀಡಿದಸಂದರ್ಭದಲ್ಲಿಯೂ ಕೋರಲಾಗಿದೆ.

ಇದೇ ಸಂದರ್ಭದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮುನವಳ್ಳಿಯಲ್ಲಿಯೇ ಲಸಿಕೆ ನೀಡಲು ವ್ಯವಸ್ಥೆ ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀಮುರುಘಂದ್ರ ಮಹಾಸ್ವಾಮಿಗಳು ಮಾತನಾಡಿ, ಎಲ್ಲರೂ ಧೈರ್ಯದಿಂದ ಲಸಿಕೆಯನ್ನು ಪಡೆದುಕೊಂಡು ಕೊರೋನಾ ಮುಕ್ತ ಭಾರತ ಮಾಡಬೇಕು. ಲಾಕ್‌ಡೌನ್ ಸಂಕಷ್ಟ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕಳೆದ ಬಾರಿ ಹಾಗೂ ಈ ವರ್ಷ ಎಲ್ಲ ಕಾರ್ಮಿಕ ವರ್ಗದವರಿಗೆ, ಬಡಜನರಿಗೆ ಸಹಾಯಧನ ನೀಡುತ್ತಿರುವುದು ಶ್ಲಾಘನೀಯ ಎಂದರು.

ಪುರಸಭೆ ಅಧ್ಯಕ್ಷ ವಿಜಯ ಅಮಠ, ತಹಸೀಲ್ದಾರ ಪ್ರಶಾಂತ ಪಾಟೀಲ, ಸಿ.ಪಿ.ಐ. ಮಂಜುನಾಥ ನಡುವಿನಮ ನಿ, ತಾಲೂಕಾ ವೈದ್ಯಾಧಿಕಾರಿ ಮಹೇಶ ಚಿತ್ತರಗಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಡಾ.ಎಸ್.ಎಲ್ .ದಂಡಗಿ, ಡಾ. ರವಿ ಹನಸಿ, ರಮೇಶ ಗೋಮಾಡಿ, ನಿಂಗನಗೌಡ ಮಲಗೌಡ್ರ, ಜಿ.ಜಿ.ಗಂಗಣ್ಣವರ, ದುಂಡಪ್ಪ ಬುರ್ಜಿ, ಅಶೋಕ ಗೋಮಾಡಿ, ಮಲ್ಲೇಶ್ವರ ಸೂಳೇಭಾಂವಿ, ಪ್ರಕಾಶ ನಲವಡೆ, ಬಸವರಾಜ ಶಿಗ್ಗಾಂವಿ, ಸುಭಾಸ ಗೀದಿಗೌಡ್ರ ಸೇರಿದಂತೆ ಪುರಸಭೆ ಸದಸ್ಯರು ಇದ್ದರು.

(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply