BengaluruKoppal

ಕುಷ್ಟಗಿಯಲ್ಲಿ ನೂತನ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಲು ಗೃಹ ಮಂಡಳಿ ವ್ಯಾಪ್ತಿಯಲ್ಲಿರುವ ಭೂಮಿ ಹಸ್ತಾಂತರಿಸಲು ಬೆಂಗಳೂರಿನಲ್ಲಿ ಸಭೆ.


ಬೆಂಗಳೂರು: ಇಂದು ವಿಕಾಸಸೌಧ, ಬೆಂಗಳೂರಲ್ಲಿ ಕುಷ್ಟಗಿ ಪಟ್ಟಣ ವ್ಯಾಪ್ತಿಯಲ್ಲಿ
ಕರ್ನಾಟಕ ಗೃಹ ಮಂಡಳಿ ವಶದಲ್ಲಿರುವ 6 ಎಕರೆ 10 ಗುಂಟೆ
ಜಮೀನಿನನ್ನು ನೂತನ ಆಸ್ಪತ್ರೆ ಕಟ್ಟಡ ನಿರ್ಮಿಸಲು ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವ ಪ್ರಸ್ತಾಪ
ಕುರಿತಂತೆ ವಸತಿ ಸಚಿವ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ
ಇಂದು ಸಭೆ ನಡೆಯಿತು. ಈ ಸಭೆಯಲ್ಲಿ ಶ್ರೀ ಅಮರೇಗೌಡ ಬಯ್ಯಾಪೂರ ಅವರು ಪಾಲ್ಗೊಂಡು, ಕುಷ್ಟಗಿಯಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣದ
ಅವಶ್ಯಕತೆಯಿರುವುದರಿಂದ ಜಮೀನನ್ನು ಆರೋಗ್ಯ ಇಲಾಖೆಗೆ
ಹಸ್ತಾಂತರಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಗೃಹ ಮಂಡಳಿ ಯ ,ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆರ್ ಶರಣಪ್ಪಗುಮಗೇರಾ.


Leave a Reply