Koppal

ಕಾಂಗ್ರೇಸ್ ಪಕ್ಷದ ಎಸ್ ಸಿ ಘಟಕ ಕುಷ್ಟಗಿ ವತಿಯಿಂದ ವಿಭಿನ್ನ ಪ್ರತಿಭಟನೆ.


ಕುಷ್ಟಗಿ: ಶಾಸಕರಾದ ಶ್ರೀ ಅಮರೇಗೌಡ ಪಾಟೀಲ ಬಯ್ಯಾಪೂರ ಹಾಗೂ ಮಾಜಿ ಶಾಸಕರಾದ ಶ್ರೀ ಹಸನಸಾಬ ದೋಟಿಹಾಳ ರವರ ಆದೇಶ ಮೇರೆಗೆ ಕುಷ್ಟಗಿಯ ತಿಕೋಟಿಕರ್ ಪೆಟ್ರೋಲ್ ಬಂಕ್ ನಲ್ಲಿ ಬ್ಲಾಕ್ ಕಾಂಗ್ರೆಸ್ (SC ವಿಭಾಗ) ನಗರ ಘಟಕದ ವತಿಯಿಂದ ಇಂದು ಪೆಟ್ರೋಲ್ ದರ 100=00 ರೂ, ದಾಟಿದ ಪ್ರಯುಕ್ತ ಪೆಟ್ರೋಲ್ ಹಾಕಿಸಲು ಬಂದ ಗ್ರಾಹಕರಿಗೆ ಸಿಹಿ ಹಂಚಿ ವಿನೂತನ ಪ್ರತಿಭಟನೆ ಮಾಡಲಾಯಿತು,ಈಗಾಗಲೇ ಕೇಂದ್ರ ಸರ್ಕಾರ ಅಡುಗೆ ಅನೀಲ,ಪೆಟ್ರೋಲ್,ಡಿಸೇಲ್,ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ,ಸಾರ್ವಜನಿಕ ಬಹಳ ತೊಂದರೆ ಯಾಗಿದ್ದು,ಜನರು ಸಂಕಷ್ಟದಲ್ಲಿದ್ದಾರೆ ಎಸ್ ಸಿ ಘಟಕದ ಅಧ್ಯಕ್ಷರಾದ ಮಂಜು ಕಟ್ಟಿಮನಿ ಹೇಳಿದರು. ಸಂದರ್ಭದಲ್ಲಿ ತಾಜುದ್ದೀನ್ ದಳಪತಿ, ಮಂಜು ಟೆಂಗುಂಟಿ, ಮುರುಳಿ ಹಿರೇಮನಿ, ಎಂ ಡಿ ಯುಷುಪ್, ಅಂಬ್ರೇಷ ಕಾಮನೂರ, ತೊಂಡೆಪ್ಪ ಚೂರಿ, ಪ್ರಮೋದ ಬಡಿಗೆರ, ಸದ್ದಾಂ ಅಮರಾವತಿ ಮಹಿಬೂಬು ಸಾಬ, ದಾದಿ ಬಾಯಿ ಇನ್ನೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ- ಆರ್ ಶರಣಪ್ಪ ಗುಮಗೇರಾ.


Leave a Reply