karanatakaKoppal

ಕುಷ್ಟಗಿ ಸೋಲಾರ್ ಘಟಕ ದ ವತಿಯಿಂದ ದಿನಸಿ ಆಹಾರ ಕಿಟ್ ವಿತರಣೆ.


ಕುಷ್ಟಗಿ: ತಾಲೂಕಿನ ಕೋವಿಡ್ ಸೆಂಟರ್ ಗಳಿಗೆ ದಿನಸಿ ಆಹಾರ ಕಿಟ್ ನ್ನು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (Corporate social responsibility) ಅಡಿಯಲ್ಲಿ ಕುಷ್ಟಗಿ ಹಾಗೂ ದೋಟಿಹಾಳ ಕೋವಿಡ್ ಸೆಂಟರ್ ಗೆ ತೆರಳಿ ಕೊರೋನಾ ಸೊಂಕಿತರು ಆರೋಗ್ಯ ದಲ್ಲಿ ಚೇತರಿಸಿಕೊಂಡು ಮನೆಗೆ ತೆರಳುವ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಕುಷ್ಟಗಿ ಸೋಲಾರ್ ಘಟಕದವರು , ಮಾನ್ಯ ತಹಶೀಲ್ದಾರರು ಹಾಗೂ ಕುಷ್ಟಗಿ ಪೋಲಿಸ್ ಠಾಣೆಯ ಸಿಪಿಐ. ನಿಂಗಪ್ಪ ರುದ್ರಪ್ಪಗೋಳ್ ,ಪಿಎಸ್ ಐ.ತಿಮ್ಮಣ್ಣ ನಾಯಕ, ನೇತೃತ್ವದಲ್ಲಿ ಕುಷ್ಟಗಿಯ ಸೋಲಾರ್ ಪ್ಲಾಂಟ್ ನ ಮ್ಯಾನೇಜರ್ ಶ್ರೀ ಸುರೇಶ ಅವರಿಂದ ಮಾಸ್ಕ್ ,ಸ್ಯಾನಿಟೈಜರ್ ಹಾಗೂ ಪುಡ್ ಕಿಟ್ ಗಳನ್ನು ಸಾಂಕೇತಿಕವಾಗಿ ನೀಡಲಾಯಿತು . ಕಳೆದ ವರ್ಷವು ಸಹ ಈ ಸೋಲಾರ್ ಘಟಕದಿಂದ ದಿನಸಿ ಆಹಾರ ಕಿಟ್ ಗಳನ್ನು ಪೊಲೀಸ್ ಇಲಾಖೆ,ಕಂದಾಯ ಇಲಾಖೆ ಹಾಗೂಗ್ರಾಮ ಪಂಚಾಯತಿಗಳಿಗೆ, ಕಿಟ್ ನೀಡಿತ್ತು ,ಅದೇ ರೀತಿ ಕುಷ್ಟಗಿ ತಹಸೀಲ್ದಾರ ಎಂ ಸಿದ್ದೇಶ ರವರ ಸೂಚನೆ ಮೇರೆಗೆ ಈ ಬಾರಿಯು ದಿನಸಿ ಆಹಾರ ಕಿಟ್ ಗಳನ್ನು ನೀಡಿದರು.ಕುಷ್ಟಗಿ ತಹಸೀಲ್ದಾರ ಎಂ ಸಿದ್ದೇಶ ಮಾತನಾಡಿ ಕೋವಿಡ್ ಸೆಂಟರ್ ಗಳು ಕುಷ್ಟಗಿ ತಾಲೂಕಿನಲ್ಲಿ 6 ಇದ್ದು ,ಅಲ್ಲಿರುವ ಸೊಂಕಿತರು ಗುಣ ಮುಖರಾಗಿ ಮನೆಗೆ ಹೋಗುವ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ವಿತರಿಸಲಾಗುವದು ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಸೋಲಾರ್ ಘಟಕದ ಪ್ರಾಜೆಕ್ಟ್ ಮ್ಯಾನೇಜರ್ ಸುರೇಶ ಶರ್ಮಾ, ಮಾತನಾಡಿ ಇಂತಹ ಸಂದರ್ಭದಲ್ಲಿ ಇನ್ನೊಬ್ಬ ರಿಗೆ ನೆರವಾಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ,ಹಾಗಾಗಿ ನಮ್ಮ ಕೈಲಾದ ಮಟ್ಟಿಗೆ ನಾವು ಮಾಡುತ್ತೇವೆ ಎಂದರು.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ,ಗ್ರಾಮ ಪಂಚಾಯತಿ ಅಧಿಕಾರಿಗಳು, ಪೋಲಿಸ್ ಇಲಾಖೆಯವರು,ಉಪಸ್ಥಿತರಿದ್ದರು.

ವರದಿ- ಆರ್ ಶರಣಪ್ಪ ಗುಮಗೇರಾ.


Leave a Reply