Belagavi

ಶನೇಶ್ವರ ಸ್ಮರಣೆಯಿಂದ ಕಷ್ಟಗಳು ದೂರ, ವೀರೇಶ ಸ್ವಾಮಿಗಳು


ಬೈಲಹೊಂಗಲ ೧೧- ಪ್ರತಿಯೊಬ್ಬ ಮಾನವ£ಗೆ ಕಷ್ಟಗಳು ಇರೋದು ಸಹಜ ಇಂತಹ ಸಂದರ್ಭದಲ್ಲಿ ಶನೇಶ್ವರನ ಪೂಜೆ ಹಾಗೂ ಸ್ಮರಣೆ ಮಾಡುವುದರಿಂದ ಕಷ್ಟಗಳು ದೂರವಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಬಗಳಾಂಬ ದೇವಿಯ ಆರಾಧಕ ವೇದಮೂರ್ತಿ ವೀರೇಶ ಸ್ವಾಮಿಗಳು ಹೇಳಿದರು.
ಪಟ್ಟಣದ ಹೊಸ ರಸ್ತೆಯಲ್ಲಿರುವ ಬಗಳಂಬ ದೇವಿಯ ದೇವಸ್ಥಾನದಲ್ಲಿ ಗುರುವಾರ ನಡೆದ ಶನೇಶ್ವರ ಜಯಂತಿ ಹಾಗೂ ಅಮವಾಸೆ £ಮಿತ್ಯ ದೇವಿಯ ವಿಶೇಷ ಪೂಜಾಕಾರ್ಯದಲ್ಲಿ ಮಾತನಾಡಿದ ಅವರು ಲೋಕಕಲ್ಯಾಣ ಹಾಗೂ ಜನಕಲ್ಯಾಣಕ್ಕಾಗಿ ದೇಶವ್ಯಾಪಿ ಹಬ್ಬಿರುವ ಮಹಾಮಾರಿ ಕೊರೊನಾ ದೂರವಾಗಿ ಜನರಿಗೆ ಉತ್ತಮ ಆರೋಗ್ಯ ಸಿಗಲು ಹಾಗೂ ಈ ವರ್ಷ ಉತ್ತಮ ಮಳೆಯಾಗಿ ರೈತರಿಗೆ ಒಳ್ಳೆಯ ಬೆಲೆ ಬರುವ ಸಲವಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಅಲ್ಲದೆ ಸೂರ್ಯಗ್ರಹಣದಿಂದ ಜನತೆಗೆ ಯಾವುದೇ ದುಷ್ಪರಿಣಾಮ ಆಗದಿರಲು ವಿಶೇಷ ಪೂಜೆ ಹೋಮ ಕಾರ್ಯ ಮಾಡಲಾಗಿದೆ ಎಂದು ನುಡಿದರು.
ನ್ಯಾಯವಾದಿ ಗಂಗಾಧರ ಗಿರಿಯನ್ನವರ, £ವೃತ್ತ ಉಪ ತಶಿಲ್ದಾರ ದತ್ತಾತ್ರೇಯ ಕುಲಕರ್ಣಿ. ಶಿವಯ್ಯ ಕಲ್ಲಯ್ಯ ನವರ, ಉದಯ ಕ£್ನ ನಾಯ್ಕರ, ಬಸವರಾಜ್ ಕೋರಿಕೊಪ್ಪ. ಜವಾಹರ್ ಪತ್ತಾರ, ಬಸವರಾಜ್ ಮುದಕವಿ. ಎಸ್ ವಿ ತುರುಮರಿ, ಗಂಗಾಧರ್ ಬೊಂಗಾಳೆ. ಮಲ್ಲೇಶಪ್ಪ . ಕೋಲಕಾರ, £ವೃತ್ತ ಶಿಕ್ಷಕ ಕುಲಕರ್ಣಿ ಈ ಸಂದರ್ಭದಲ್ಲಿ ಹಾಜರಿದ್ದರು.


Leave a Reply