Belagavi

ಖ್ಯಾತ ಸಾಹಿತಿ, ಕವಿ ಡಾ.ಸಿದ್ದಲಿಂಗಯ್ಯ ಶ್ರದ್ಧಾಂಜಲಿ ಸಲ್ಲಿಸಿದ ಅಂಬೇಡ್ಕರ ನಗರದ ಯುವಕರು


ಯರಗಟ್ಟಿ : ಸ್ಥಳೀಯ ಯರಗಟ್ಟಿಯ ಅಂಬೇಡ್ಕರ್ ನಗರದಲ್ಲಿ ಬಂಡಾಯ ಸಾಹಿತಿ, ಹಿರಿಯ ಕವಿ ಡಾ.ಸಿದ್ದಲಿಂಗಯ್ಯನವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿಕ್ಷಕರಾದ ಸಂತೋಷ ತಳವಾರ ಕರ್ನಾಟಕ ಕಂಡ ಸಂವೇದನಾಶೀಲ ಕವಿ, ಸಂಶೋಧಕ, ಅಧ್ಯಾಪಕ, ಜನಪರ ಒಲವಿನ ಚೇತನ ಸಿದ್ದಲಿಂಗಯ್ಯ ಅವರ ನಿಧನದಿಂದ ಕನ್ನಡ ಸಾಹಿತ್ಯ ಮತ್ತು ಜನಪರ ಚಳವಳಿಗಳಿಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ ಮತ್ತು ಒಡನಾಡಿಗಳಿಗೆ ದುಃಖವನ್ನು
ತಡೆದುಕೊಳ್ಳುವ ಶಕ್ತಿ ಬರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಾಸ್ಕರ ಹಿರೇಮೇತ್ರಿ, ಶಿಕ್ಷಕರಾದ ಸೋಮು ಮಾಳಗಿ, ಮೋಜಸ್ ಚನ್ನಮೇತ್ರಿ, ಬಾಬು ಚನ್ನಮೇತ್ರಿ, ಸುನೀಲ ಚನ್ನಮೇತ್ರಿ, ಶ್ರೀಕಾಂತ ಚನ್ನಮೇತ್ರಿ, ಬಸವರಾಜ ಚನ್ನಮೇತ್ರಿ, ಮಲ್ಲಿಕಾರ್ಜುನ ಮಾಳಗಿ, ಸುದೀಪ ಮಾಳಗಿ, ಮಹಾಂತೇಶ ಮುಡೆನ್ನವರ, ಕಾಶಿ ಚನ್ನಮೇತ್ರಿ, ಶಶಿಕುಮಾರ ಚನ್ನಮೇತ್ರಿ ಇನ್ನುಳಿದವರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply