karanatakaKoppal

ತೈಲ ಬೆಲೆ ಏರಿಕೆ ಸಮರ್ಥಸಿಕೊಂಡ ಸಂಸದ ಸಂಗಣ್ಣ ಕರಡಿ ಹೇಳಿಕೆ.


ಕುಷ್ಟಗಿ:ಪೆಟ್ರೋಲ್ ಮತ್ತು ಡಿಸೇಲ್ ಹಾಗೂ ಅಡುಗೆ ಎಣ್ಣೆ,ಅಡುಗೆ ಅನೀಲ, ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಂಡ ಕೊಪ್ಪಳ ಸಂಸದ ಸಂಗಣ್ಣ ಕರಡಿ

ಕುಷ್ಟಗಿ :ಪಟ್ಟಣದ ಭಾರತೀಯ ಜನತಾ ಪಾರ್ಟಿ ಮಂಡಲ ಕುಷ್ಟಗಿ ಮಾಜಿ ಶಾಸಕ ಹಾಗೂ ಬಿಜೆಪಿ ಕೊಪ್ಪಳ ಜಿಲ್ಲಾದ್ಯಕ್ಷರಾದ ದೊಡ್ಡನಗೌಡ ಎಚ್ ಪಾಟೀಲ ಇವರ ನೇತೃತ್ವದಲ್ಲಿ ಕಡು ಬಡವರಿಗೆ ಸಾಂಕೇತಿಕವಾಗಿ ವಾರ್ಡ ನಂಬರ್ ೨೦ ರಲ್ಲಿ ಆಹಾರ ಕಿಟ್ ವಿತರಣೆ ಮಾಡಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ತೈಲ ಬೆಲೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾವಾಗುತ್ತದೆ ಅದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು.

ಇದನ್ನೂ ರಾಜಕೀಯ ವಾಗಿ ವಿರೋಧ ಪಕ್ಷದವರು ವಿರೋಧ ಮಾಡುವುದು ಸಹಜ, ಅವರ ಬಗ್ಗೆ ಹೆಚ್ಚು ಗಮನ ಕೊಡುವ ಅಗತ್ಯ ವಿಲ್ಲಾ ಎಂದರು ಸಂಸದ ಸಂಗಣ್ಣ ಕರಡಿ ಹೇಳಿದರು.ನಾವು ಮತ್ತು ನಮ್ಮ ಸರ್ಕಾರಗಳು , ಕೊರೋನಾ ಮಹಾ ಮಾರಿ ತಡೆಗಟ್ಟುವ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚು ಗಮನ ನೀಡುತ್ತಿವೆ, ಎಂದರು.

ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನವರ ಹೆಸರು ಕೆಡಿಸಲು ಬೇರೆ ದಾರಿಯಿಲ್ಲದೆ,

ಈ ರೀತಿ ವಿರೋಧ ಪಕ್ಷದವರು ಮಾಡುತ್ತಿದ್ದಾರೆ ಎಂದರು.

ಆದರೆ ಈ ದೇಶದ ಜನತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯವರ ಜೊತೆಗಿದ್ದಾರೆ. ಅದರಲ್ಲಿ ಸಂಶಯವೇ ಬೇಡ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಗಂಗಾಧರಯ್ಯ ಹಿರೇಮಠ, ಮುಖಂಡರಾದ ಶಶಿಧರ ಕವಲಿ, ಪುರಸಭೆ ಸದಸ್ಯರಾದ ರಾಜೇಶ ಪತ್ತಾರ, ಜಯತೀರ್ಥಿ ಆಚಾರ್, ಕಲ್ಲೇಶ ತಾಳದ್, ಮಲ್ಲಣ್ಣ ಪಲ್ಲೇದ್, ಸಂಗನಗೌಡ ಜೈನರ್, ಚಂದ್ರಕಾಂತ ವಡಗೇರಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

ವರದಿ- ಆರ್ ಶರಣಪ್ಪ ಗುಮಗೇರಾ.


Leave a Reply