karanataka

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರಿಂದ ಧರಣಿ


ಯರಗಟ್ಟಿ: ಸವದತ್ತಿ , ಯರಗಟ್ಟಿ, ಮುನವಳ್ಳಿ ಮತ್ತು ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಿರುವುದನ್ನು ಖಂಡಿಸಿ, ಪೆಟ್ರೋಲ್ 100 ನಾಟೌಟ್ ಎಂಬ ಹೆಸರಿನ ಆಂದೋಲನದ ಮೂಲಕ ಪ್ರತಿಭಟಿಸಲಾಯಿತು.

ದೇಶದ ಬಡಜನರಿಗೆ ಅಚ್ಚೇ ದಿನ್ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅಗತ್ಯ ವಸ್ತುಗಳು, ಪೆಟ್ರೋಲ್, ಗ್ಯಾಸ್ ಬೆಲೆಯನ್ನು ಮನಸೋಯಿಚ್ಛೆ ಏರಿಸುವ ಮೂಲಕ ಕೊರೊನಾದಿಂದ ಕೈಸೋತು ಕುಳಿತಿರುವ ಜನಸಾಮಾನ್ಯರ ತಲೆಯ ಮೇಲೆ ಚಪ್ಪಡಿ ಎಳೆಯುತ್ತಿದೆ.

ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಬೆಲೆಗಳು ಬಡಜನರ ಕೈಗೆಟಕದಂತೆ ಬಿಜೆಪಿ ಸರ್ಕಾರ ಏರಿಕೆ ಮಾಡುತ್ತಿರುವುದು ಅನ್ಯಾಯ,ಈ ಬಿಜೆಪಿ ಸರ್ಕಾರಗಳಿಗೆ ದೇಶದ ಜನರ ಬಗ್ಗೆ ಕಿಂಚಿತ್ತಾದರೂ ಕಾಳಜಿ, ಕನಿಕರ ಇದ್ದರೆ, ಕೂಡಲೇ ಅಗತ್ಯ ವಸ್ತುಗಳ, ಕಾಳು ಕಡಿಗಳ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಮುಂತಾದ ವಸ್ತುಗಳ ಬೆಲೆಗಳನ್ನು ತಕ್ಷಣವೇ ಇಳಿಸಲಿ ಎಂದು ಆಗ್ರಹಿಸುತ್ತೇನೆ.

ಈ ಸಂದರ್ಭದಲ್ಲಿ ಸವದತ್ತಿ ಕಾಂಗ್ರೆಸ್ ಮುಖಂಡ ಶ್ರೀ ವಿಶ್ವಾಸ್ ವೈದ್ಯ, ಜಿಲ್ಲಾ ಅಧ್ಯಕ್ಷ ವಿನಯ್ ನಾವಲಗಟ್ಟಿ, ಮಾಜಿ ಶಾಸಕ ಆರ್ ವಿ ಪಾಟಿಲ್, ಜಿಲ್ಲಾ ಪಂಚಾಯತ್ ಸದಸ್ಯ ಫಕ್ಕೀರಪ್ಪ ಹದ್ದನವರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲು ಜಕಾತಿ, ಪುರಸಭೆ ಸದಸ್ಯ ಬಾಪೂ ಚುರಿಖಾನ್, ಎಮ್. ಬಿ. ಸವದತ್ತಿ, ಮಾಜಿ ಪುರಸಭೆ ಸದಸ್ಯ ಚಂದ್ರಣ್ಣ ಶಾಮರಾಯನವರ, ಬಿ. ಎನ್. ಪ್ರಭುಣವರ್‌, ಮಲ್ಲಿಕಾರ್ಜುನ ಪೂರಗುಡಿ, ಬಸವರಾಜ್ ಗುರನ್ನವರ್, ಮಹಾರಾಜ್ ಗೌಡ ಪಾಟೀಲ, ಗಂಗಯ್ಯ ಅಮೋಘಿಮಠ, ಫಕ್ರುದ್ದೀನ್ ದೊಡಮನಿ, ಯೂಥ್ ಕಾಂಗ್ರೆಸ್ ಅಧ್ಯಕ್ಷ ಆಕೀಫ್ ಯಡ್ತಾಂವಿ, ಡಿ. ಡಿ ಸಣ್ಣಕ್ಕಿ, ಹುಸೇನ್ ಮಲ್ದಾರ್, ಪಂಚನಗೌಡ ದ್ಯಾಮನಗೌಡರ, ರವೀಂದ್ರ ಯಲಿಗಾರ,ಪರಶುರಾಮ ಗಂಟಿ, ಹಾರೂನ್ ಹುಕ್ಕೇರಿ, ಬ್ಲಾಕ್ ಅಧ್ಯಕ್ಷ ಡಿ.ಡಿ.ಟೋಪೋಜಿ, ಉಮೇಶ ಬಾಳಿ, ಮಂಜುನಾಥ ತಡಸಲೂರ, ಅಲ್ತಾಪ್ ಮುಲ್ಲಾ, ಶಿವಾನಂದ ಕರಿಗಾರ, ಡಿ.ಕೆ.ರಫೀಕ, ಸಲಿಂಬೇಗ ಜಮಾದಾರ ಹಾಗೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply