Belagavi

ವಚನಗಳಲ್ಲಿ ಆರೋಗ್ಯ ಕುರಿತು ಉಪನ್ಯಾಸ


ಬೆಳಗಾವಿ:೨೩- ಕ.ಸಾ.ಪ. ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕು ಕಸಾಪ ಘಟಕಗಳ ಸಹಯೋಗದೊಂದಿಗೆ ರವಿವಾರ ದಿನಾಂಕ:೨೭/೦೬/೨೦೨೧ ರಂದು ಸಂಜೆ ೫:೦೦ ಗಂಟೆಗೆ, “ವಚನಗಳಲ್ಲಿ ಆರೋಗ್ಯ” ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ವೆಬಿನಾರ್ ಮೂಲಕ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿಯ ಹಿರಿಯ ಸಾಹಿತಿಗಳಾದ ಡಾ.ಗುರುದೇವಿ ಹುಲೆಪ್ಪನವರಮಠ ಅವರು ವಹಿಸಲಿದ್ದು. ಹಾಗೂ ಬೈಲಹೊಂಗಲದ ವಾಗ್ಮಿಗಳು ಶ್ರೀಮತಿ. ಪ್ರೇಮಕ್ಕ ಅಂಗಡಿ ಅವರು “ವಚನಗಳಲ್ಲಿ ಆರೋಗ್ಯ” ಕುರಿತು ಉಪನ್ಯಾಸವನ್ನು ನೀಡಲಿದ್ದಾರೆ. ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಆಶಯ ನುಡಿಯನ್ನು ಮಂಡಿಸುವರು. ಕಸಾಪ ಸವದತ್ತಿ ತಾಲೂಕಿನ ಅಧ್ಯಕ್ಷರಾದ ಶ್ರೀ.ಸಿ.ಬಿ.ದೊಡಗೌಡರ ಅವರು ಸ್ವಾಗತ ಮತ್ತು ಪರಿಚಯವನ್ನು ಮಾಡಲಿದ್ದಾರೆ. ಶ್ರೀಮತಿ. ಲಲಿತಾ ಕ್ಯಾಸನ್ನವರ ಅವರು ವಂದನಾರ್ಪಣೆಯನ್ನು ಮಾಡಲಿದ್ದಾರೆ. ಕಸಾಪ ರಾಮದುರ್ಗ ತಾಲೂಕಿನ ಅಧ್ಯಕ್ಷರು ಶ್ರೀ ಪಾಂಡುರAಗ ಜಟಗನ್ನವರ ಅವರು ಕಾರ್ಯಕ್ರಮವನ್ನು ಸಂಯೋಜನೆ ಹಾಗೂ ನಿರೂಪಣೆಯನ್ನು ಮಾಡಲಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಸಾಪ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು ಮತ್ತು ಎಲ್ಲ ತಾಲೂಕಿನ ಕಾರ್ಯಕಾರಿ ಸಮೀತಿಯ ಸರ್ವ ಸದಸ್ಯರು ಹಾಗೂ ಜಿಲ್ಲಾ ಕಾರ್ಯಕಾರಿ ಸಮೀತಿಯ ಸರ್ವ ಸದಸ್ಯರು ಹಿರಿಯ-ಕಿರಿಯ ಸಾಹಿತಿಗಳು, ಕಲಾವಿದರು ಮತ್ತು ಸಮಸ್ತ ಕನ್ನಡಾಭಿಮಾನಿಗಳು ಈ ಕೆಳಗಿನ ಕೊಂಡಿಯನ್ನು ಬಳಸಿಕೊಂಡು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಮತ್ತು ಜಿಲ್ಲಾ ಕಾರ್ಯಕಾರಿ ಸಮೀತಿಯ ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Leave a Reply