Koppal

ಟಿಬಿ ಕೊನೆಗಾಣಿಸಲು ಖಾಸಗಿ ಸಹಭಾಗಿತ್ವ ಮಹತ್ವದ್ದು: ಟಿ ಎಚ್ ಒ ಆನಂದ ಗೋಟೂರ.


ಕುಷ್ಟಗಿ- ನಗರದ ತಾಲೂಕ ಆರೋಗ್ಯಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅವರ ಕಾರ್ಯಾಲಯದಲ್ಲಿ ಇಂದು ನಡೆದ ಖಾಸಗಿ ವೈದ್ಯರ, ಔಷಧ ವಿತರಕರು, ಖಾಸಗಿ ಪ್ರಯೋಗಾಲಯಗಳ ತಂತ್ರಜ್ಞರ ಸಭೆಯಲ್ಲಿ

ಡಾಕ್ಟರ್ ಆನಂದ ಗೋಟೂರ THO ಕುಷ್ಟಗಿ ಮಾತನಾಡಿ ಕ್ಷಯ ಮುಕ್ತ ಕುಷ್ಟಗಿ ಮಾಡುವಲ್ಲಿ ಖಾಸಗಿಯವರ ಪಾತ್ರದ ಕುರಿತು ವಿವರಿಸುತ್ತಾ ನಿಮ್ಮ ಸಹಕಾರ ಇದ್ದರೆ ಮಾತ್ರ ಕ್ಷಯ ಮುಕ್ತ ಭಾರತ ಮಾಡಲು ಸಾಧ್ಯ ಎಂದರು.

ಜಿಲ್ಲಾ ಖಾಸಗಿ-ಸರಕಾರಿ ಸಂಯೋಜಕರಾದ ಗೋಪಾಲಕೃಷ್ಣ ಅವರು ಪ್ರಾಸ್ತಾವಿಕವಾಗಿ ಖಾಸಗಿಯವರಿಗೆ ಟಿಬಿ ರೂಪರೇಶವನ್ನು ತಿಳಿಸಿದರು.

ತಾಲ್ಲೂಕು ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ವೆಂಕಟೇಶ್ ಗುಡಗುಡಿ ಮಾತನಾಡಿ ನೀವು ನಮಗೆ ಸಹಕಾರ ನೀಡಿ, ಸಂಶಯಾಸ್ಪದ ಕೆಸ್ ರೆಫೆರಲ್ ಮಾಡಿ, ಪಾಲೊವ್ ನಾವು ಮಾಡುತ್ತೆವೆ ಎಂದರ..

ಕಾರ್ಯಕ್ರಮದಲ್ಲಿ ತಾಲ್ಲೂಕ ಕ್ಷಯರೋಗ ಆರೋಗ್ಯ ಪರಿವೀಕ್ಷಕ ವೀರಭದ್ರಪ್ಪ ಗಂಗನಾಳ ಸ್ವಾಗತಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಖಾಸಗಿ ವೈದ್ಯಾಧಿಕಾರಿಗಳು, ಔಷಧ ವಿತರಕರು, ಪ್ರಯೋಗ ಶಾಲಾ ತಂತ್ರಜ್ಞರು ಭಾಗವಹಿಸಿದ್ದರು.

ವರದಿ-ಆರ್  ಶರಣಪ್ಪಗುಮಗೇರಾ

ಕೊಪ್ಪಳ


Leave a Reply