karanataka

ದಲಿತ,ದಮನಿತರ ಕೊಲೆ ದೌರ್ಜನ್ಯಗಳ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಜು.19 ರಂದು ಕೊಪ್ಪಳ ಚಲೋ


ರಾಯಚೂರು, ಜು.14- ದಲಿತ ಮತ್ತು ದಮನಿತರ ಕೊಲೆ,ದೌರ್ಜನ್ಯಗಳ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ದಲಿತ ದಮನಿತರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಗಳ ಕೆರೆ ಹಿನ್ನಲೆ ಜುಲೈ 19 ರಂದು ಕೊಪ್ಪಳ ಚಲೋ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ದಮನಿತರ ಒಕ್ಕೂಟ ಮತ್ತು ಪ್ರಗತಿಪರ ಸಂಘನೆಗಳ ಒಕ್ಕೂಟದ ಮುಖಂಡ ಜೆ. ಬಿ.ರಾಜು ಹೇಳಿದರು.

ಅವರಿಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿ,ಸ್ವಾತಂತ್ರ ಬಂದು 74 ವರ್ಷ ಕಳೆದರೂ ದೇಶದ ದಲಿತರಿಗೆ ಮತ್ತು ಇತರೆ ದುರ್ಬಲ ಜಾತಿಯ ಜನರಿಗೆ ಸ್ವಾತಂತ್ರ್ಯವೂ ಗಗನ ಕುಸುಮವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಲಿತರಿಗೆ ಮತ್ತು ದುರ್ಬಲ ಜನರಿಗೆ ರಕ್ಷಣೆ ಇಲ್ಲವಾಗಿದೆ.ಜಾತಿ ದೌರ್ಜನ್ಯ,ಕೊಲೆ,ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಗಳು ಮತ್ತು ಮರ್ಯಾದಾ ಹತ್ಯೆಗಳು ಇನ್ನಷ್ಟು ತೀವ್ರಗೊಂಡಿದೆ ಎಂದು ಆರೋಪಿಸಿದರು.
ಅಸ್ಪೃಶ್ಯತೆ ಆಚರಣೆ ಮತ್ತು ಜಾತಿ ಶೋಷಣೆಗೆ ಮೂಲ ಅಸ್ತ್ರವಾಗಿರುವ ಮನು ಸ್ಪೃತಿಯ ತತ್ವಗಳನ್ನು ಸಂಪುರ್ಣವಾಗಿ ಜಾರಿಗೊಳಿಸುವ ಕಾರ್ಯ ತೀವ್ರ ಸ್ವರೂಪದಲ್ಲಿ ಮುಂದುವರೆದಿದೆ ಎಂದರು.
ಎಂ. ಆರ್ ಬೇರಿ ಮಾತನಾಡಿ,ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ದಲಿತರ ಕೊಲೆ ಮತ್ತು ದೌರ್ಜನ್ಯಗಳು ನಿರಂತರವಾಗಿ ಮುಂದುವರೆದಿವೆ. ಈ ಕ್ಷೇತ್ರದ ಶಾಸಕರು ಮೇಲ್ಯಾತಿಯ ಬಲಿಷ್ಟ ವರ್ಗದ ನಿಯಂತ್ರಣದಲ್ಲಿದ್ದಾರೆ . ಹಾಗಾಗಿ ದಲಿತರಿಗೆ , ಇತರೆ ಜಾತಿಯ ದುರ್ಬಲರಿಗೆ ರಕ್ಷಣೆ ಇಲ್ಲವಾಗಿದೆ. ಈ ಕ್ಷೇತ್ರದ ಪೊಲೀಸ್ ಠಾಣೆಗಳು ಬಲಿಷ್ಟರ ಕೇಂದ್ರಗಳಾಗಿವೆ , ದೌರ್ಜನ್ಯಕ್ಕೊಳಗಾದ ಜನರು ಪೊಲೀಸ್ ಠಾಣೆಗೆ ಹೋದರೆ ಪೊಲೀಸರು ಕೇಸ್ ದಾಖಲಿಸಿಕೊಳ್ಳುತ್ತಿಲ್ಲ.ಒತ್ತಡ ಮಾಡಿದರೆ , ದೌರ್ಜನ್ಯ ಮಾಡಿದವರ ಕಡೆಯಿಂದ ದೂರು ಪಡೆದುಕೊಂಡು ಕೌಂಟರ್ ಕೇಸ್ ಮಾಡಿಕೊಳ್ಳುತ್ತಿದ್ದಾರೆ.ಶಾಸಕರು ಕಾನೂನು ಪ್ರಕಾರ ಕೆಲಸ ಮಾಡಿದರೆ ಯಾರಿಗೂ ತೊಂದರೆಯಾಗುವುದಿಲ್ಲ . ಆದರೆ ಬಲಿಷ್ಠರೊಂದಿಗೆ ಮತಬ್ಯಾಂಕ್ ರಾಜಕೀಯ ಮಾಡುತ್ತಿರುವುದರಿಂದ , ದಲಿತರು ಮತ್ತು ದುರ್ಬಲರಿಗೆ ನಿರಂತರ ಅನ್ಯಾಯವಾಗುತ್ತಿದೆ ಕೆಲವು ಹಳ್ಳಿಗಳಲ್ಲಿ ಬಲಿಷ್ಟರು ಸರ್ಕಾರದ ಕಾಯ್ದೆ ಕಾನೂನುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತ ಪಾಳೆಗಾರಿಕೆ ರೀತಿಯ ಆಳ್ವಿಕೆ ನಡೆಸುತ್ತಿದ್ದಾರೆ.
ದಿ 22-6-2021 ರಂದು ಕಾರಟಗಿ ತಾಲೂಕಿನ ಬರಗೂರು ಗ್ರಾಮದ 22 ವಯಸ್ಸಿನ ಯುವಕ ದಾನಪ್ಪ ಕೊಲೆ ಮಾಡಲಾಗಿದೆ.ಕಕ್ಕರಗೊಳ ಗ್ರಾಮದ ದಲಿತ ರಾಘವೇಂದ್ರ ಎನ್ನುವ ಜರ್ನಲಿಸಂ ವಿದ್ಯಾರ್ಥಿಯನ್ನು ಕೊಲೆ ಮಾಡಲಾಗಿದೆ.ಕೊಲೆಯಾದ ಯುವಕರ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ಮತ್ತು ಸರ್ಕಾರ ಉದ್ಯೋಗ ಅಥವಾ 4 ಎಕರೆ ಭೂಮಿಯನ್ನು ಕೊಡಬೇಕು.ಜಾತಿ ಕೊಲೆಗಳ ಮತ್ತು ಜಾತಿ ದೌರ್ಜನ್ಯ ಗಳಿಗೆ ಆಯಾ ಭಾಗದ ಪೊಲೀಸ್ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಸಬೇಕುಎಂದು ಒತ್ತಾಯಿಸಿದರು.

ವರದಿ-ವಿಶ್ವನಾಥ ಸಾಹುಕಾರ
ರಾಯಚೂರು.


Leave a Reply