Uncategorized

ಅಬ್ದುಲ್ಲಾ ಖಾನ ಮಸೀದಿ ಖಬ್ರಸ್ತಾನದ ವಸ್ತುಸ್ಥಿತಿ ಬಗ್ಗೆ ಬಹಿರಂಗ ಚರ್ಚೆಗೆ ಸೂಕ್ತ ಸಲಹೆಗೆ ಸ್ವೀಕರಿಸಲು ಸಿದ್ಧ – ಎಮ್.ಕೆ. ಬಾಬರ


ರಾಯಚೂರು, ಜು.೧೪- ಅಬ್ದುಲ್ಲಾ ಖಾನ ಮಸೀದಿ ಮತ್ತು ಖಬ್ರಸ್ತಾನದ ವಸ್ತುಸ್ಥಿತಿಯ ನೈಜತೆಯ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ವಾಸ್ತವತೆಯ ನೈಜತೆಯ ಹಾಗೂ ಸೂಕ್ತ ಸಲಹೆ ಅಭಿಪ್ರಾಯಗಳನ್ನು ಸ್ವೀಕರಿಸಲು ಸಿದ್ಧ ಎಂದು ಅಬ್ದುಲ್ಲಾ ಖಾನ ಮಸೀದಿ ಹಾಗೂ ಖಬ್ರಸ್ತಾನ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ನಗರ ಸಭೆ ಸದಸ್ಯ ಎಮ್.ಕೆ. ಬಾಬರ ಹೇಳಿದರು.ಅವರಿಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿ,
ನಮ್ಮ ಸಮುದಾಯದ ಅಬ್ದುಲ್ಲಾ ಖಾನ ಮಸೀದಿ ಮತ್ತು ಬಿಜಸ್ತಾನದ ಆಸ್ತಿಯ ಹದ್ದುಬಸ್ತಿನ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇವರು ಅಬ್ಬುಲಾ ಬಾನ ಮಸೀದಿ ಮತ್ತು ಖಬ್ರಸ್ತಾನದ ಆಸ್ತಿಯನ್ನು ನೈಜವಾಗಿ ಸ್ಥಳ ಪರಿಶೀಲಿಸಿ ಶೀಘ್ರದಲ್ಲಿ ನ್ಯಾಯ ಒದಗಿಸುತ್ತಾರೆಂದು ಅಪಾರ ನಂಬಿಕೆ ಇದೆ.ಕೆಲವು ಮುಂಖಡರು ಹಾಗೂ ಜನರು ಸೇರಿ ಅಲ್ಲಿರುವಂತಹ ಮಿಬ್ರಸ್ತಾನದ ಎರಡನೇ ಭಾಗದಲ್ಲಿ ಬರುವಂತಹ ಅನಾಧಿಕೃತ ರಸ್ತೆಗಳನ್ನು ಮುಚ್ಚಬಾರದು ಎಂದು ಮನವಿ ಮಾಡಿದ್ದಾರೆ ಆದರೆ ನಾವು ನಕ್ಷೆಯಲ್ಲಿರುವಂತಹ ರಸ್ತೆಯನ್ನು ಬಿಡುತ್ತೇವೆ ಎಂದು ಈ ಮುಂಚೆಯೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಕೊತ್ತಪೇಟೆ ಜನರಿಗೆ ತಿರುಗಾಡು ಹಲವಾರು ದಾರಿಗಳು ಇದ್ದರೂ ಜನರ ದಿಕ್ಕನ್ನು ತಪ್ಪಿಸಿ, ನಮ್ಮ ಕೆಲಸ ಕಾರ್ಯಕ್ಕೆ ಅಡ್ಡಿ ಪಡಿಸಬಾರದು ಎಂದು ಮನವಿ ಮಾಡಿದರು.
ಕೋಮು ಗಲಭೆಗಳನ್ನು ಸೃಷ್ಟಿ ಮಾಡುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. ನನ್ನ ಜೀವನದಲ್ಲಿ ಕೋಮುಗಲಭೆಗಳನ್ನು ಮಾಡಿಲ್ಲ.ಸರ್ವ ಧರ್ಮದವರೊಂದಿಗೆ ಭಾತೃತ್ವ ಭಾವನೆ ಹೊಂದಿದವನಾಗಿದ್ದು ಸಮುದಾಯದ ಸಮನ್ವಯತೆ ಕಾಪಾಡಿಕೊಳ್ಳಲು ಸಿದ್ಧ. ಗಂಗಾಮತ ಸಮಾಜ,ಯಾದವ ಸಮಾಜ , ವೀರಶೈವ ಸಮಾಜ , ಆರ್ಯ ವೈಶ್ಯಾ , ಸಮಾಜ , ಮೂನ್ನೂರು ಕಾಪು ಸಮಾಜ , ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ , ಉಪ್ಪಾರ ಸಮಾಜ , ಮಡಿವಾಳ ಸಮಾಜ , ಸವಿತಾ ಸಮಾಜ ಭಾವಸಾರ ಕ್ಷತ್ರೀಯ ಸಮಾಜ ಹಾಗೂ ಇತರೇ ಎಲ್ಲಾ ಸಮುದಾಯದ ಮುಂಖಡರನ್ನು ಕರೆಯಿಸಿ ಕಾನೂನಿನ ಚೌಕಟ್ಟಿನಲ್ಲಿ ಅಬ್ದುಲ್ಲಾ ಖಾನ ಮಸೀದಿ ಮತ್ತು ಮಿಬ್ರಸ್ತಾನ ಸ್ಥಳವನ್ನು ಪರಿಶೀಲಿಸಿ ವಸ್ತುಸ್ಥಿತಿಯ ನೈಜತೆಯನ್ನು ಅರಿತು ಅವರುಗಳು ನೀಡಿದ ಸೂಕ್ತ ಸಲಹೆ ಮತ್ತು ಅಭಿಪ್ರಾಯಗಳನ್ನು ಸ್ವೀಕರಿಸಲು ಸಿದ್ಧ ಎಂದರು.ಕೋಮು ಗಲಭೆಯನ್ನು ಸೃಷ್ಟಿಸುವಂತಹ ಜಾಯಿಮಾನ ನನ್ನದಲ್ಲ , ಎಲ್ಲಾ ಸಮುದಾಯದವರನ್ನು ಭಾತೃತ್ವ ಭಾವನೆ ಮತ್ತು ಅಪಾರ ನಂಬಿಕೆ ಇಟ್ಟಿಕೊಂಡು ಬಂದವನು ನಾನು ನೀವು ಏನಾದರೂ ಹೇಳಿದರು ನನ್ನ ಪಾಲಿಗೆ ಆಶೀರ್ವಾದ ಎಂದರು.
ಹರಿಕ್ ನಾಡ ಗೌಡರವರೇ,ಪಿ.ಜಿ. ರಾಘು ರವರೇ ನಮ್ಮ ಯಾದವ ಸಮಾಜದ ಜಾಗವು ಅಬ್ದುಲ್ಲಾ ಖಾನ ಮಸೀದಿ ಮತ್ತು ಖಬ್ರಸ್ತಾನ್ಯಕೆ ಅಂಟಿಕೊಂಡಿದ್ದು ೨೦೦೯ ಕ್ಕಿಂತ ಮುಂಚಿತವಾಗಿ ಈ ಖಚಿಸ್ತಾನ ಜಾಗದಂತೆ ಯಾದವ ಸಮಾಜದ ಆಸ್ತಿಯ ಜಾಗದಲ್ಲಿಯೂ ಸಹ ಬಹಿರುದೆಸೆ ಮಾಡುವುದು ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು . ಕೆಲವು ಅಡ್ಡ ರಸ್ತೆಗಳು ಇದ್ದವು ಅಂತಹ ಪರಿಸ್ಥಿತಿಯಲ್ಲಿಯೂ ೨೦೦೯ ರಲ್ಲಿ ಅಬ್ದುಲ್ಲಾ ಖಾನ ಮಸೀದಿ ಮತ್ತು ಬಸ್ತಾನಿನ ಸ್ವಚ್ಚತೆ ಹಗೂ ಹದ್ದುಬಸ್ತಿನ ಬಗ್ಗೆ ಧ್ವನಿ ಎತ್ತಿ ಹೋರಾಟ ಮಾಡಿ ಕಾಂಪೌಡ ಗೋಡೆಯನ್ನು ಕಟ್ಟಿದ್ದು , ಕಂಪೌಡ ಗೋಡೆಯ ನಂತರ ನಮ್ಮ ಯಾದವ ಸಂಘದಲ್ಲಿ ವಾಣಿಜ್ಯ ಸಂರ್ಕೀಣ ಕಾಂಪ್ಲೆಕ್ಸ್ , ಸಮುದಾಯ ಭವನ ಫಂಕ್ಷನ ಹಾಲ್ , ಶಾಲೆಯ ಸ್ವಚ್ಛತೆ ಹಾಗೂ ಶ್ರೀ ಕೃಷ್ಣ ಮಂದಿರದ ನಿರ್ಮಾಣದ ಅಪಾರವಾದ ಗೌರವ ಇದೆ. ನಿಮ್ಮ ಎದೆಯ ಮೇಲೆ ಕೈ ಇಟ್ಟಿಕೊಂಡು ಒಮ್ಮೆ ಆಲೋಚಿಸಿ, ಆತ್ಮಾವಲೋಕನ ಮಾಡಿಕೊಳ್ಳಿ ಯಾದವ ಸಂಘದ ಸ್ಥಳದಂತೆ ಹದ್ದುಬಸ್ತಗಿ ಮಾಡಿಕೊಂಡತೇ ನಾವು ಮಸೀದಿ ಮತ್ತು ಖಬ್ರಸ್ತಾನ ಹದ್ದುಬಸ್ತ ಮಾಡಿಕೊಳ್ಳಲು ಮುಂದಾದರೇ ಇದು ಕೋಮು ಗಲಭೆಯೇ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಹ್ಮದ್ ಮಸೂಮ್ , ಮೊಹಮ್ಮದ್ ಸುಲ್ತಾನ್, ಮೈಬುಬ್ ಅಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ-ವಿಶ್ವನಾಥ ಸಾಹುಕಾರ
ರಾಯಚೂರು.


Leave a Reply