Uncategorized

2021ರ ಜುಲೈ ತಿಂಗಳ ಪಡಿತರ ಧಾನ್ಯ ವಿತರಣೆ


ರಾಯಚೂರು, ಜು.14, ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಮತ್ತು ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ 2021ರ ಜುಲೈ ಮಾಹೆಗೆ ಪಡಿತರ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ.

ಅಂತ್ಯೋದಯ ಮತ್ತು ಬಿ.ಪಿ,ಎಲ್ ಪಡಿತರ ಚೀಟಿದಾರರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿಯಲ್ಲಿ ಪಡಿತರ ಚೀಟಿಯಲ್ಲಿನ ಪ್ರತಿ ಸದ್ಯಸರಿಗೆ 05 ಕೆ.ಜಿ ಅಕ್ಕಿ ಮತ್ತು ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ 15 ಕೆ.ಜಿ ಅಕ್ಕಿ ಹಾಗೂ 20ಕೆ.ಜಿ ಜೋಳ ನೀಡಲಾಗುತ್ತದೆ.
ಬಿ.ಪಿ.ಎಲ್ ಪಡಿತರ ಚೀಟಿದಾರರ ಪ್ರತಿ ಸದ್ಯಸರಿಗೆ 02 ಕೆ.ಜಿ ಅಕ್ಕಿ ಮತ್ತು 03 ಕೆ.ಜಿ ಜೋಳ ಹಾಗೂ ಪ್ರತಿ ಬಿಪಿಎಲ್ ಪಡಿತರ ಚೀಟಿಗೆ 02 ಕೆ.ಜಿ ಗೋಧಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.
ಆನ್ ಲೈನ್‍ನಲ್ಲಿ ಹೊಸ ಅರ್ಜಿ ಸಲ್ಲಿಸಿದ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತ 10ಕೆಜಿ ಅಕ್ಕಿ ಹಾಗೂ ಎಪಿಎಲ್ ಪ್ರತಿ ಅರ್ಜಿಗೆ ಕೆ.ಜಿಗೆ 15ರೂ.ದಂತೆ 10 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ.
ನ್ಯಾಯಬೆಲೆ ಅಂಗಡಿಕಾರರು ಬೆಳಗ್ಗೆ 7 ರಿಂದ ರಾತ್ರಿ 9ರವರೆಗೆ ನ್ಯಾಯ ಬೆಲೆ ಅಂಗಡಿ ತೆರೆದು ಪಡಿತರ ವಸ್ತು ವಿತರಿಸುತ್ತಾರೆ. ಪಡಿತರ ಪಡೆಯಲು ಬರುವ ಪಡಿತರ ಚೀಟಿ ಸದಸ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಆಹಾರ ಧಾನ್ಯ ಪಡೆಯಬೇಕು.
ಕೇಂದ್ರ ಸರಕಾರದ ಗ್ರಾಹಕರ ಮತ್ತು ಆಹಾರ ನಾಗರಿಕ ಸರಬರಾಜು ಮಂತ್ರಾಲಯದ ಆದೇಶದನ್ವಯ ಕಡ್ಡಾಯವಾಗಿ ಓಟಿಪಿ ಮೂಲಕವೇ ಪಡಿತರ ವಿತರಿಸುತ್ತಿರುವುದರಿಂದ ಪಡಿತರ ಚೀಟಿದಾರರು ನೋಂದಾಯಿತ ಮೊಬೈಲ್‍ನ್ನು ನ್ಯಾಯ ಬೆಲೆ ಅಂಗಡಿಯವರಿಗೆ ತೋರಿಸಿ ಪಡಿತರ ವಸ್ತು ಪಡೆದುಕೊಳ್ಳಬಹುದಾಗಿದೆ.
ಯಾವುದೇ ನ್ಯಾಯಬೆಲೆ ಅಂಗಡಿಕಾರರು ಕಡಿಮೆ ಪ್ರಮಾಣದ ಪಡಿತರವನ್ನು ವಿತರಣೆ ಮಾಡಿದ್ದಲ್ಲಿ, ಹಣ ಕೇಳಿದಲ್ಲಿ ಮತ್ತು ಇತರೆ ದೂರುಗಳಿಗೆ ನಿಶುಲ್ಕ ದೂರವಾಣಿ ಸಂಖ್ಯೆ 1967ಗೆ ಅಥವಾ ಆಯಾ ತಾಲ್ಲೂಕಿನ ತಹಶೀಲ್ದಾರ ಕಛೇರಿಗೆ ಅಥವಾ ಜಿಲ್ಲೆಯ ಉಪನಿದೇರ್ಶಕರ ಕಛೇರಿಗೆ ದೂರನ್ನು ಸಲ್ಲಿಸಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply