Uncategorized

ತ್ಯಾಜ ನೀರನ್ನು ಜಲಮೂಲಗಳಿಗೆ ವಿಸರ್ಜನೆ ಮಾಡಿದ್ರೆ ಕಾನೂನು ಕ್ರಮ


ರಾಯಚೂರು, ಜು.14, ಉದ್ದಿಮೆಗಳು ತ್ಯಾಜ್ಯ ನೀರನ್ನು ಟ್ಯಾಂಕರ್ ಮುಖಾಂತರ ರಾತ್ರಿ ಸಮಯದಲ್ಲಿ ಜಲಮೂಲಗಳಿಗೆ ವಿಸರ್ಜಿಸುತ್ತಿರುವ ಬಗ್ಗೆ ಈ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯಲ್ಲಿ ದೂರುಗಳು ಸ್ವೀಕರಿಸಲಾಗುತ್ತಿದೆ.
ಟ್ಯಾಂಕರ್‍ನ ಗುರುತು ಅಂದರೆ ವಾಹನದ ಸಂಖ್ಯೆ, ಮಾಲೀಕರ ವಿಳಾಸ ಹಾಗೂ ಇತ್ಯಾದಿ ವಿವರಗಳು ಲಭ್ಯವಿಲ್ಲದೇ ದೂರಿನ ವಿರುದ್ಧ ಜಲ (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ, 1974 ರ ಅಡಿಯಲ್ಲಿ ಕ್ರಮ ಜರುಗಿಸುವುದು ಸಾಧ್ಯವಿರುವುದಿಲ್ಲ.
ಈ ರೀತಿ ಕಾನೂನು ಬಾಹಿರವಾಗಿ ಟ್ಯಾಂಕರ್ ಮುಖಾಂತರ ತ್ಯಾಜ್ಯ ನೀರನ್ನು ವಿಸರ್ಜಿಸುತ್ತಿರುವವರ ವಿವರವನ್ನು ಸಾರ್ವಜನಿಕರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಛೇರಿಗೆ ದೂರವಾಣಿ ಸಂಖ್ಯೆ : 08532 227989 ಮಾಹಿತಿಯನ್ನು ನೀಡಲು ಕೋರಲಾಗಿದೆ. ಆಲ್ಲದೆ ಮಾಹತಿ ನೀಡಿದ ವ್ಯಕ್ತಿಯ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಲಾಗಿದೆ.

ವರದಿ-ವಿಶ್ವನಾಥ ಸಾಹುಕಾರ
ರಾಯಚೂರು.


Leave a Reply