Belagavi

ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕರಾದ ಜಿ ರಾಮಯ್ಯ ರಿಗೆ ಸನ್ಮಾನ


ಬೆಳಗಾವಿ ದಿ೧೫:- ನಗರ ಕೇಂದ್ರ ಗ್ರಂಥಾಲಯ ಬೆಳಗಾವಿಯ ಅಧಿಕಾರಿಗಳಾಗಿದ್ದ ರಾಮಯ್ಯ. ಜಿ .ಅವರು ಉಪ£ರ್ದಶಕರಾಗಿ ಪದೋನ್ನತಿ ಹೊಂದಿ ಅಧಿಕಾರ ವಹಿಸಿಕೊಂಡ £ಮಿತ್ತ ಅವರನ್ನು ನಗರದ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನ ಪರವಾಗಿ ಇಂದು ಸನ್ಮಾ£ಸಲಾಯಿತು
. ಮೂಲತಃ ರಾಯಚೂರು ಜಿಲ್ಲೆಯ ಸಣ್ಣ ಹಳ್ಳಿಯಿಂದ ಬಂದು ಸಾರ್ವಜ£ಕ ಗ್ರಂಥಾಲಯ ಇಲಾಖೆಯಲ್ಲಿ ಉಪ£ರ್ದೇಶಕರಾಗಿ ಪದೋನ್ನತಿ ಹೊಂದಿರುವುದು ಅತ್ಯಂತ ಖುಷಿಯ ವಿಚಾರ. ಶ್ರೀಯುತರು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸುಮಾರು ೧೫ ವರ್ಷ ಸೇವೆ ಸಲ್ಲಿಸಿ,ನಂತರ ಗ್ರಂಥಾಲಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಗ್ರಂಥಾಲಯ ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಮಾಡಿರುವ ಸರಳ ಸಜ್ಜ£ಕೆಯ, ದಕ್ಷ , ಪ್ರಾಮಾಣಿಕ ಅಧಿಕಾರಿ ಯಾಗಿರುವ ರಾಮಯ್ಯ ಅವರು ಬೆಳಗಾವಿ ನಗರ ಕೇಂದ್ರ ಗ್ರಂಥಾಲಯದ ಚಿತ್ರಣ ವನ್ನೇ ಬದಲಾಯಿಸಿ ಹಲವಾರು ಸುಧಾರಣೆ ಮಾಡಿರುವುದು, ಓದುಗರು ಗ್ರಂಥಾಲಯ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿರುವರು,ಓದುಗರಿಗೆ ಗ್ರಂಥಾಲಯದಲ್ಲಿ ಹಲವು ಸೌಲಭ್ಯ ಒದಗಿಸಿ ಓದುಗರ ಪ್ರಶಂಸೆಗೆ ಪಾತ್ರವಾಗಿರುವರು
ನಗರ ಮತ್ತು ಜಿಲ್ಲೆಯ ಗ್ರಂಥಾಲಯಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಿದ್ದಾರೆ.
ಸಿಬ್ಬಂದಿ ಮತ್ತು ಓದುಗರ ಮೆಚ್ಚಿನ ಅಧಿಕಾರಿಗಳಾದ ರಾಮಯ್ಯ ಅವರನ್ನು ಇಂದು ಅವರು ಪದೋನ್ನತಿ ಪಡೆದ £ಮಿತ್ತ ಬೆಳಗಾವಿ ನಗರದ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಬಸವರಾಜ ಸುಣಗಾರ ಮತ್ತು ಪ್ರಕಾಶ ಇಚಲಕರಂಜಿ ಯವರು ಸನ್ಮಾನ ಮಾಡಿ ಅವರಿಗೆ ಶುಭ ಕೋರಿದರು, ಅವರ ಮುಂಬರುವ ಸೇವಾವಧಿಯಲ್ಲಿ ಉತ್ತಮ ಕಾಯ೯ ಚಟುವಟಿಕೆಗಳನ್ನು ಮಾಡಲೆಂದು ಆಶಿಸಿ ಅಭಿನಂದಿಸಿದರು ಈ ಸಂದರ್ಭದಲ್ಲಿ ಮಾಜಿ ಗ್ರಂಥಾಲಯ ಅಧಿಕಾರಿ ಡಿ ಎ ಕುಲಕರ್ಣಿ ಅವರು ಇದ್ದರು.


Leave a Reply