Belagavi

ಎಸ್.ಎಸ್.ಎಲ.ಸಿ. ವಿದ್ಯಾರ್ಥಿಗಳಿಗೆ ೧೩ ಸಾವಿರ ಮಾಸ್ಕಗಳನ್ನು ಶಾಸಕ ಅನಿಲ ಬೆನಕೆ ಅವರಿಂದ ವಿತರಣೆ


ಬೆಳಗಾವಿ: ದಿನಾಂಕ ೧೪ ಜುಲೈ ೨೦೨೧ ರಂದು ಎಸ್.ಎಸ್.ಎಲ.ಸಿ. ಪರೀಕ್ಷೆಯ ಮುಂದಾಲೋಚನೆಯಲ್ಲಿ ಸುರೇಶ ಯಾದವ ಫೌಂಡೇಶನ ವತಿಯಿಂದ ೧೩ ಸಾವಿರ ಮಾಸ್ಕಗಳನ್ನು ಡಿ.ಡಿ.ಪಿ.ಆಯ. ಹಾಗೂ ಬಿ.ಇ.ಓ. ಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅನಿಲ ಬೆನಕೆ ಕೊರೊನಾ ಮಹಾಮಾರಿ ಹಿನ್ನಲೆಯಲ್ಲಿ ಮುಂಬರುವ ಎಸ್.ಎಸ್.ಎಲ.ಸಿ. ಪರೀಕ್ಷೆಗೆ ಪೂರ್ವ ತಯಾರಿಯಾಗಿ ಮಾಸ್ಕಗಳನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಯಾವುದೇ ಅಂಜಿಕೆ ಇಲ್ಲದೇ ಪರೀಕ್ಷೆಯನ್ನು ಪೂರೈಸಬೇಕು, ರಾಜ್ಯ ಸರ್ಕಾರ ಸ್ಥಳಿಯ ಸಂಸ್ಥೆಗಳು ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿವೆ, ನನ್ನ ಕಾರ್ಯಕರ್ತರು ಪ್ರತಿಯೊಂದು ಶಾಲೆಯಲ್ಲು ಸ್ಯಾನಿಟೈಜೇಶನ ಮಾಡುವರು, ನಾವೆಲ್ಲರು ಕೂಡಿ ಕೊರೊನಾ ಮಹಾಮಾರಿ ವಿರುದ್ಧ ಹೊರಾಡಲು ಸಿದ್ದರಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುರೇಶ ಯಾದವ, ರಾಜು ಡೋನಿ, ಗುರುದೇವ ಪಾಟೀಲ, ಶಂಕರ ಪಾಟೀಲ, ಮೋಹನ ಚಿತಳೆ ಸೇರಿದಂತೆ ಸುರೇಶ ಯಾದವ ಫೌಂಡೇಶನ ಪದಾಧಿಕಾರಿಗಳು ಉಪಸ್ಥಿತರಿದ್ದರು.


Leave a Reply