Belagavi

ಈರುಳ್ಳಿ ಬೆಳೆಯ ರೊಗ ಲಕ್ಷಣಗಳ ನಿಯಂತ್ರಣಕ್ಕೆ ಔಷಧಿ ಸಿಂಪರಣೆಯ ಕ್ರಮಗಳು


ಬೆಳಗಾವಿ, ಜು.೧೫ ): ಬೆಳಗಾವಿ ಜಿಲ್ಲೆಯ ಮುಖ್ಯವಾದ ತೋಟಗಾರಿಕೆಯ ವಾಣಿಜ್ಯ ತರಕಾರಿ ಬೆಳೆಗಳಲ್ಲಿ ಈರುಳ್ಳಿ ಬೆಳೆಯನ್ನು ರಾಮದುರ್ಗ, ಸವದತ್ತಿ ಮತ್ತು ಬೈಲಹೊಂಗಲ ತಾಲೂಕುಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು, ಪ್ರಸಕ್ತ ಮಳೆಯಿಂದ ಭೂಮಿಯಲ್ಲಿ ಹೆಚ್ಚಿನ ತೇವಾಂಶದಿAದ ಈರುಳ್ಳಿ ಬೆಳೆಯಲ್ಲಿ ರೋಗಗಳು ಕಾಣಿಸುತ್ತಿದ್ದರಿಂದ ರೈತರು ಮುಂಜಾಗ್ರತಾ ಕ್ರಮವಾಗಿ ಔಷಧಿ ಸಿಂಪರಣೆ ಮಾಡಬೇಕು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆಯಲ್ಲಿ ರೋಗಗಳು ಕಾಣಿಸಿಕೊಂಡಲ್ಲಿ ೦.೩ ಗ್ರಾಂ ಥಿಯೊಮಿತೋಕ್ಷಾಮ್+೧ ಗ್ರಾಂ ಬೋರಾನ್+ ೦.೫ ಮಿಲಿ ಅಂಟು ದ್ರಾವಣ ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪರಣೆ ಮಾಡಬೇಕು. ಅದಲ್ಲದೇ, ೨ ರಿಂದ ೩ ಗ್ರಾಂ ಪ್ರತಿ ಲೀಟರ್ ನೀರಿಗೆ ೧೯:೧೯:೧೯ ರಷ್ಟು ಸಿಂಪರಣೆ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಹೋಬಳಿ ಅಥವಾ ತಾಲುಕು ತೋಟಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಬೆಳಗಾವಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು (ಜಿ.ಪಂ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply