Uncategorized

ಜು. 18 ರಿಂದ ಶ್ಯಾಮಲಾ ಎಸ್ ಕುಂದರ್ ಅವರ ಕರ್ನಾಟಕ ಪ್ರವಾಸ


ರಾಯಚೂರು, ಜೂ.15 ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಶ್ಯಾಮಲಾ ಎಸ್ ಕುಂದರ್ ಅವರು ಜು.18ರಿಂದ 25 ರವರೆಗೆ ಕರ್ನಾಟಕದ ಪ್ರವಾಸ ಕೈಗೊಂಡಿದ್ದಾರೆ.
ಪ್ರವಾಸದ ವಿವರ:-
ಅವರು ಜು.18ರ ರವಿವಾರ ಮಧ್ಯಾಹ್ನ 6 ಗಂಟೆಗೆ ದೆಹಲಿಯ ವಿಮಾನ ನಿಲ್ದಾಣದಿಂದ ಪ್ರಯಾಣಬೆಳಸಿ ಮಂಗಳೂರಿಗೆ ಸಂಜೆ 5ಗಂಟೆಗೆ ತಲುಪಲಿದ್ದಾರೆ. ನಂತರ ರಸ್ತೆ ಮಾರ್ಗವಾಗಿ ಹೊರಟು ಉಡುಪಿಗೆ ಪ್ರಯಣ ಬೆಳಸಿ ಸ್ಪಂದನಾ ಸ್ವದಾರ ಗ್ರಹಕ್ಕೆ ಭೇಟಿ ನೀಡಿಲ್ಲಿದ್ದಾರೆ.
ಜು. 19 ರ ಸೋಮವಾರ ಬೆಳಿಗ್ಗೆ 9 ಗಂಟೆಗೆ ಕಾರ್ಕಲಾ ತಾಲ್ಲೂಕು, ಆಶ್ರಯ ಮನೆ ಭೇಟಿ ನೀಡಲಿದ್ದಾರೆ.
ಜು. 20 ರ ಮಂಗಳವಾರ ಬೆಳಿಗ್ಗೆ 9 ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಬೆಳಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ, ಎಸ್‍ಪಿ, ಡಬ್ಲ್ಯೂಸಿಡಿ ಇಲಾಖೆಯೊಂದಿಗೆ ಸಭೆ ನಡೆಸಲಿದ್ದಾರೆ.

ಜು. 21 ರ ಬುಧವಾರ ಬೆಳಿಗ್ಗೆ 11 ರಾಯಚೂರು ಜಿಲ್ಲೆಗೆ ಭೇಟಿನೀಡಿ ಇಲ್ಲಿನ ಸಕ್ರ್ಯೂಟ್ ಹೌಸ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಜು. 22 ರ ಗುರುವಾರ ಬೆಳಿಗ್ಗೆ 11 ಗಂಟೆಗೆ ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಿದ್ದಾರೆ.

ಜು. 23 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮೈಸೂರಿನಲ್ಲಿ ನಿಲ್ಲಿಸಿ ಶಕ್ತಿ ಧಾಮ ಜೆಎಸ್‍ಎಸ್ ಕಾಲೇಜ್ ಭೇಟಿ ನೀಡಿ. ಊಟಿ ನಂಜನಗುಡು ರಸ್ತೆಯಲ್ಲಿ ಇರುವ ಆಶ್ರಯ ಮನೆ ಭೇಟಿ ನೀಡಲಿದ್ದಾರೆ.

ಜು. 24 ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಮೈಸೂರಿನಲ್ಲಿ ನಿಲ್ಲಿಸಿ ಶಕ್ತಿ ಧಾಮ ಜೆಎಸ್‍ಎಸ್ ಕಾಲೇಜ್ ಭೇಟಿ ನೀಡಿ ಮೂಮೆಂಟ್, ಕಿಡಾಬ್, ಕೈಗಾರಿಕಾ ವಸತಿ ಪ್ರದೇಶ, ಹೆಬ್ಬಾ ರಿಂಗ್ ರಸ್ತೆ, ಆಶ್ರಯ ಮನೆ, ಮೈಸೂರು ನಂತರ ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಉಡುಪಿ ರಸ್ತೆ ಮಾರ್ಗವಾಗಿ ಮಂಗಳೂರಿನ ವಿಮಾನ ನಿಲ್ದಾಣದಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ ಎಂದು ಅಪ್ತ ಸಹಾಯಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ-ವಿಶ್ವನಾಥ ಸಾಹುಕಾರ ರಾಯಚೂರು.


Leave a Reply