Uncategorized

ಪಿಂಚಣಿ ಪಡೆಯಲು ಅವಕಾಶ


ರಾಯಚೂರು, ಜು.15, ಸರ್ಕಾರದ ಆದೇಶದ ಪ್ರಕಾರ ಸಾರ್ವಜನಿಕ ಕ್ಷೇತ್ರದ ನಾಲ್ಕು ಬ್ಯಾಂಕುಗಳಲ್ಲಿ ಮಾತ್ರ ಪಿಂಚಣಿ ಪಡೆಯಲು ಪಿಂಚಣಿದಾರರಿಗೆ ಅವಕಾಶ ಕಲ್ಪಿಸಿಲಾಗಿದೆ.

ಪಿಂಚಣಿದಾರರು ಕಡ್ಡಾಯವಾಗಿ ನಮೂನೆಯಲ್ಲಿ ಅರ್ಜಿಯ ಜೊತೆಗೆ ಮೊಬೈಲ್ ಸಂಖ್ಯೆ, ಬ್ಯಾಂಕ್ ವಿವರ, ಖಜಾನೆ-2 ರ ಸಂಕಲನ ಹೊಂದಿದ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಕಾಪೆರ್Çರೇಷನ್ ಬ್ಯಾಂಕ್), ಕೆನರಾ ಬ್ಯಾಂಕ್ (ಸಿಂಡಿಕೇಟ್ ಬ್ಯಾಂಕ್), ಬ್ಯಾಂಕ್ ಆಫ್ ಬರೋಡ ಯಾವುದಾದರೂ ನಾಲ್ಕು ಬ್ಯಾಂಕುಗಳ ಒಂದರಲ್ಲಿ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳನ್ನು ಪಡೆಯಲು ಪಿಂಚಣಿದಾರ ರಿಂದ ಅಭಿಮತ ಪಡೆದು ಪಿಂಚಣಿ ದಾಖಲೆಗಳನ್ನು ಮಹಾಲೇಕಪಾಲರಿಗೆ ಸಲ್ಲಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ-ವಿಶ್ವನಾಥ ಸಾಹುಕಾರ.ರಾಯಚೂರು.


Leave a Reply