Uncategorized

ಅಲ್ಕಾವಟಗಿ: ನವಜಾತ ಗಂಡು ಶಿಶು ಪತ್ತೆ


ರಾಯಚೂರು, ಜು.15, ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಅಲ್ಕಾವಟಗಿ ಗ್ರಾಮದಲ್ಲಿ 2021ರ ಜು.07 ಬುಧವಾರ ದಂದು ನವಜಾತ ಗಂಡು ಶಿಶುವೊಂದು ಪತ್ತೆಯಾಗಿದೆ.

ಮಗು ರೋದಿಸುತ್ತಿರುವ ಶಬ್ದ ಕೇಳಿಸಿಕೊಂಡಿರುವ ಸಾರ್ವಜನಿಕರು ಪೆÇಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೆÇಲೀಸರು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಮಗುವನ್ನು ನಗರದ ರಿಮ್ಸ್ ಆಸ್ಪತ್ರೆಯ ಪೆÇೀಷಣೆ ಮತ್ತು ರಕ್ಷಣೆಗಾಗಿ ದಾಖಲಿಸಲಾಗಿದೆ.

ಮಗುವಿನ ಪಾಲಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂರವಾಣಿ ಸಂಖ್ಯೆ:9113522901, 8660627793 ಅಥವಾ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ವರದಿ-ವಿಶ್ವನಾಥ ಸಾಹುಕಾರ ರಾಯಚೂರು.


Leave a Reply