Uncategorized

ಶ್ರೀ ಗಂಗಾ ಪರಮೇಶ್ವರಿ ಗೃಹ ನಿರ್ಮಾಣ ಸಹಕಾರಿ ಸಂಘ: ನಿಯಮ ಬಾಹಿರ ನಿವೇಶನ ಮಂಜೂರಾತಿ –ತನಿಖೆಗೆ ಒತ್ತಾಯ


ರಾಯಚೂರು.ಜು.14 – ಶ್ರೀ ಗಂಗಾ ಪರಮೇಶ್ವರಿ ಗೃಹ ನಿರ್ಮಾಣ ಸಹಕಾರಿ ಸಂಘದ ವತಿಯಿಂದ ರಾಯಚೂರು ಸರ್ವೇ ನಂ.1238, 1236 ವಿಸ್ತೀರ್ಣ 8 ಎಕರೆ ಮತ್ತು ಸರ್ವೇ ನಂ. 1236/2 ವಿಸ್ತೀರ್ಣ 2 ಎಕರೆ ಹೀಗೆ ಒಟ್ಟು ವಿಸ್ತೀರ್ಣ 10 ಎಕರೆಯಲ್ಲಿ ರಚಿಸಲಾದ ವಸತಿ ವಿನ್ಯಾಸದಲ್ಲಿ ಅನುಮೋದಿತ ನಿವೇಶನಗಳಿಗೆ ವ್ಯತಿರಿಕ್ತವಾಗಿ ನಗರಸಭೆಯಿಂದ ನಿಯಮ ಬಾಹೀರ 31 ಹೆಚ್ಚುವರಿ ನಿವೇಶನ ಸೃಷ್ಟಿಸಿ, ಖಾತೆ ಮಾಡಿ, ಅವ್ಯವಹಾರ ಮಾಡಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಿಮ್ಮಾಪೂರು ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ರಾಯಚೂರು ಸರ್ವೇ ನಂ.1238, 1236 ವಿಸ್ತೀರ್ಣ 8ಎಕರೆ ಮತ್ತು ಸರ್ವೇ 1236/2 ವಿಸ್ತೀರ್ಣ 2 ಎಕರೆ ಹೀಗೆ ಒಟ್ಟು ವಿಸ್ತೀರ್ಣ 10 ಎಕರೆ ಭೂಮಿಯಲ್ಲಿ ಶ್ರೀ ಗಂಗಾಪರಮೇಶ್ವರಿ ಗೃಹ ನಿರ್ಮಾಣ ಸಹಕಾರ ಸಂಘ ವತಿಯಿಂದ ರಚಿಸಲಾದ ವಸತಿ ವಿನ್ಯಾಸದಲ್ಲಿ ಉಲ್ಲೇಖ -1 ರಲ್ಲಿ ಸೂಚಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ವಿನ್ಯಾಸ ಮಂಜೂರಾತಿ ಆದೇಶ ಪ್ರಕಾರ ಸರ್ವೇ ನಂ.1238, 1236 ವಿಸ್ತೀರ್ಣ 8 ಎಕರೆ ಪ್ರದೇಶಕ್ಕೆ ವಿನ್ಯಾಸ ಮಂಜೂರು ನಕ್ಷೆ ಪ್ರಕಾರ ವಾಸದ ಉದ್ದೇಶಕ್ಕಾಗಿ 16184 ಚದುರ ಮೀಟರ್ ಪ್ರದೇಶವನ್ನು ಕಾಯ್ದಿರಿಸಿದ್ದು, ಸದರಿ ಪ್ರದೇಶದಲ್ಲಿ ಒಟ್ಟು 82 ನಿವೇಶನಗಳನ್ನು ಅಳವಡಿಸಿ ಮಂಜೂರಾತಿ ನೀಡಲಾಗಿದೆ.
ಉಲ್ಲೇಖ-2 ರಲ್ಲಿ ತೋರಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ವಿನ್ಯಾಸ ಮಂಜೂರಾತಿ ಆದೇಶ ಪ್ರಕಾರ ಸರ್ವೇ ನಂ. 1236/2 ವಿಸ್ತೀರ್ಣ 2 ಎಕರೆ ಪ್ರದೇಶಕ್ಕೆ ವಸತಿ ವಿನ್ಯಾಸ ಕಾಯ್ದಿರಿಸಿದ್ದು, ಸದರಿ ಪ್ರದೇಶದಲ್ಲಿ ಒಟ್ಟು 21 ನಿವೇಶನಗಳನ್ನು ಅಳವಡಿಸಿ, ಮಂಜೂರಾತಿ ನೀಡಲಾಗಿದೆ. ಸರ್ವೇ ನಂ.1238, 1236 ವಿಸ್ತೀರ್ಣ 8 ಎಕರೆ ಹಾಗೂ ಸರ್ವೇ ನಂ.1236/2 ವಿಸ್ತೀರ್ಣ 2 ಎಕರೆ ಹೀಗೆ ಒಟ್ಟು 10 ಎಕರೆ ಪ್ರದೇಶದಲ್ಲಿ ಒಟ್ಟು 103 ನಿವೇಶನಗಳನ್ನು ಅಳವಡಿಸಿ, ರಾಯಚೂರು ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾತಿಯನ್ನು ನೀಡಲಾಗಿದೆ.
ಉಲ್ಲೇಖ-3 ರಲ್ಲಿ ತೋರಿಸಿದ ನಗರಸಭೆ ಪತ್ರದಲ್ಲಿ ತೋರಿಸಂದೆತ ರಾಯಚೂರು ನಗರಸಭೆಯಿಂದ ಮಾಹಿತಿ ಹಕ್ಕು ಅಧಿನಿಯಮದಡಿ ಅದರ ಮಾಹಿತಿಯಂತೆ ನಗರಸಭೆಯಿಂದ ವಿವಿಧ ಅಳತೆ ಮತ್ತು 134 ನಿವೇಶನಗಳಿಗೆ ಖಾತೆ ಮಾಡಲಾಗಿದೆ.ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡ ವಿನ್ಯಾಸ ನಕ್ಷೆ ಪ್ರಕಾರ ಈ ವಸತಿ ವಿನ್ಯಾಸದಲ್ಲಿ ವಿವಿಧ ಅಳತೆಯ 103 ನಿವೇಶನಗಳಿಗೆ ಮಾತ್ರ ಮಂಜೂರಾತಿ ನೀಡಲಾಗಿದ್ದು, ಸದರಿ ಅನುಮೋದಿತ ನಕ್ಷೆಗೆ ವ್ಯತಿರಿಕ್ತವಾಗಿ ನಗರಸಭೆಯವರು ಹೆಚ್ಚುವರಿ 131 ನಿವೇಶನ ಸೃಷ್ಟಿಸಿ, ವಿನ್ಯಾಸ ಮಾಲೀಕರಿಗೆ ಲಾಭ ದೊರೆಕಿಸಿಕೊಡುವ ನಿಟ್ಟಿನಲ್ಲಿ ನಿಯಮ ಬಾಹೀರವಾಗಿ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆಂದು ಆರೋಪಿಸಿದರು.
31 ಹೆಚ್ಚುವರಿ ನಿವೇಶನ ಖಾತೆಗಳನ್ನು ನಿಯಮ ಬಾಹೀರವಾಗಿ ಸೃಷ್ಟಿಸಿಕೊಂಡು, ಮಾರಾಟ ಮಾಡಿರುವ ಶ್ರೀ ಗಂಗಾಪರಮೇಶ್ವರಿ ಗೃಹ ನಿರ್ಮಾಣ ಸಹಕಾರ ಸಂಘ ಪದಾಧಿಕಾರಿಗಳು ಹಾಗೂ ಮಾಲೀಕರ ವಿರುದ್ಧ ಕಲಂ 420 ರನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಸಂಘದ ಬೈಲಾಗಳನ್ನು ಉಲ್ಲಂಘಿಸಿ, ವಿನ್ಯಾಸದ ಅನುಮೋದಿತ ನಕ್ಷೆಗೆ ವ್ಯತಿರಿಕ್ತವಾಗಿ 31 ಹೆಚ್ಚುವರಿ ನಿಯಮ ಬಾಹೀರ ನಿವೇಶನಗಳನ್ನು ಮಾರಾಟ ಮಾಡಿರುವುದಕ್ಕೆ ಶ್ರೀ ಗಂಗಾಪರಮೇಶ್ವರ ಗೃಹ ನಿರ್ಮಾಣ ಸಹಕಾರ ಸಂಘದ ನೋಂದಣಿಯನ್ನು ರದ್ದುಪಡಿಸಬೇಕು ಹಾಗೂ ಸಹಕಾರಿ ಸಂಘಗಳ ನೋಂದಣಿ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಡಗೋಳ ಶರಣಪ್ಪ, ಜೆ.ತಿಮ್ಮಪ್ಪ, ಒಪ್ಪುಲ್ ಭೀಮಣ್ಣ, ಕೋಟೆ ಆಂಜನೇಯ, ಆಂಜನೇಯ ಯಾದವ್ ಸತ್ಯನಾರಾಯಣ ಸೇರಿದಂತೆ ಇತರರು ಇದ್ದರು.

ವರದಿ- ವಿಶ್ವನಾಥ ಸಾಹುಕಾರ ರಾಯಚೂರು.


Leave a Reply