Koppal

ದಾಳಿಂಬೆ ಬೆಳೆಯಲ್ಲಿ ಅಧಿಕ ಇಳುವರಿ ಕಂಡ ಕುಷ್ಟಗಿ ತಾಲೂಕಿನ ರೈತ


ಕುಷ್ಟಗಿ: ದಾಳಿಂಬೆ ಬೆಳೆಯಿಂದ ಲಾಭವೋ?, ನಷ್ಟವೋ? ಎಂದು ಕೆಲವು ರೈತರು ಆಲೋಚಿಸುತ್ತಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಲಕಟ್ಟಿ ಗ್ರಾಮದ ರೈತರೊಬ್ಬರು ದಾಳಿಂಬೆ ಬೆಳೆದು ಲಾಭದ ಸಿಹಿ ಸವಿದಿದ್ದಾರೆ. ಇತರ ರೈತರಿಗೆ ಮಾದರಿಯಾಗಿದ್ದಾರೆ.

ದಾಳಿಂಬೆ ಬೆಳೆದು ಯಶಸ್ಸು ಕಂಡಿರುವುದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಲಕಟ್ಟಿ ಗ್ರಾಮದ ರೈತ ದ್ಯಾಮಣ್ಣ ಗ್ಯಾನಪ್ಪ ಗುಂಡಗಿ  ಜುಲಕಟ್ಟಿ ಗ್ರಾಮದ ತಮ್ಮ7 ಎಕರೆ ಜಮೀನಿನಲ್ಲಿ ದಾಳಿಂಬ್ಬೆ ಬೆಳೆಯಲು ಆಲೋಚಿಸಿದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ವಂಕಾ  ದುರ್ಗಾಪ್ರಸಾದ್ ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕ  ಕಳಕನಗೌಡ ಪಾಟೀಲ್ ಸಹಾಯಕ ತೋಟಗಾರಿಕೆ ಅಧಿಕಾರಿ ವಿನೋದ್ ಕುಮರ್ , ಸಹಾಯಕ ತೋಟಗಾರಿಕೆ ಅಧಿಕಾರಿ ಅಜರುದ್ದೀನ್ ಗುಳೆದಗುಡ್ಡ  ಮಾರ್ಗದರ್ಶನದಂತೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ ದಾಳಿಂಬೆ ಬೆಳೆ ಬೆಳೆಯಲು ಮುಂದಾದರು.
2017 ಜುಲೈನಲ್ಲಿ ದಾಳಿಂಬೆ ಕೇಸರಿ ತಳಿಯ ಸುಮಾರು 2500  ಸಸಿಗಳನ್ನು  ನಾಟಿ ಮಾಡಿದ್ದಾರೆ

ಗಿಡದಿಂದ ಗಿಡಕ್ಕೆ 5*5 ಅಡಿ ಸಾಲಿಂದ ಸಾಲಿಗೆ 10*10 ಅಡಿ ಅಂತರದಲ್ಲಿ ನಾಟಿ ಮಾಡಿದರು. ಹನಿ ನೀರಾವರಿ ಅಳವಡಿಸಿಕೊಂಡು ಗಿಡಗಳಿಗೆ ಇದ್ದ ಕಡಿಮೆ ನೀರಿನಲ್ಲಿಯೇ ನಿರ್ವಹಣೆ ಮಾಡಲು ಡ್ರಿಪ್ ವ್ಯವಸ್ಥೆ ಕಲ್ಪಿಸಿಸಲಾಗಿತ್ತು, ಇಲಾಖೆ ಅಧಿಕಾರಿಗಳ ಸಲಹೆಯಂತೆ ನೀರು ಮತ್ತು ಪೋಷಕಾಂಶಗಳ ನೀಡಿದ್ದರು

7 ಎಕರೆ ಜಮೀನಲ್ಲಿ 30 ಟನ್  ಬೆಳೆದ ದಾಳಿಂಬೆಯನ್ನು ಪ್ರತಿ ಕೆಜಿ ಗೆ 70 ರೂಪಾಯಿಯಂತೆ ಬೆಂಗಳೂರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ದಾಳಿಂಬೆಯ ಬೆಳೆಯುವ ಮೂಲಕ ಲಾಭದಾಯಕ ವ್ಯಾಪಾರ ಮಾಡಿದ್ದಾರೆ

ರೈತ  ದ್ಯಾಮಣ್ಣ ಗ್ಯಾನಪ್ಪ ಗುಂಡಗಿ ದಾಳಿಂಬೆ ಕಟಾವು ಮಾಡುವ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಕುಷ್ಟಗಿಯ ಅಧಿಕಾರಿಗಳಾದ ಹಿರಿಯ ಸಹಾಯಕ ನಿರ್ದೇಶಕರಾದ ವಂಕಾ  ದುರ್ಗಾಪ್ರಸಾದ್ ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕ  ಕಳಕನಗೌಡ ಪಾಟೀಲ್ ,  ಸಹಾಯಕ ತೋಟಗಾರಿಕೆ ಅಧಿಕಾರಿ ವಿನೋದ್ ಕುಮರ್ , ಸಹಾಯಕ ತೋಟಗಾರಿಕೆ ಅಧಿಕಾರಿ ಅಜರುದ್ದೀನ್ ಗುಳೆದಗುಡ್ಡ ,ರೈತ ಅನುಗಾರ ಬಸವರಾಜ ಯಲಬುಣಚಿ ಬೇಟಿ ನೀಡಿದರು.

ವರದಿ-ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply