Belagavi

ದುಷ್ಟ ವಿಚಾರಗಳು, ದುಷ್ಟ ಆಚಾರಗಳು, ದುಷ್ಟ ಪದ್ಧತಿಗಳು ಸಮಾಜದಿಂದ ದೂರಾಗಬೇಕು


ಬೆಳಗಾವಿ ಜು ೧೭ : ಸಮಾಜದಲ್ಲಿ ಇರುವಂತಹ ಕೆಲವು ದುಷ್ಟ ವಿಚಾರಗಳು, ದುಷ್ಟ ಆಚಾರಗಳು, ದುಷ್ಟ ಪದ್ಧತಿಗಳನ್ನು ಹೋಗಲಾಡಿಸಿ ಸಮಾಜದಲ್ಲಿ ಸಾಮರಸ್ಯವನ್ನು ನಿರ್ಮಾಣವಾಗಬೇಕು ಅಂತ ಅಂಬೇಡ್ಕರ ಅವರ ಉದ್ದೇಶ ಎಂದು ನಿವೃತ್ತ, ನ್ಯಾಯಾಂಗ ಇಲಾಖೆಯ ಮುರಳಿಧರ ದೇಶಪಾಂಡೆ ಹೇಳಿದರು.
ನಗರದ ಎಂ.ಕೆ.ಹುಬ್ಬಳ್ಳಿಯ ಅನುಭವ ಮಂಟಪದಲ್ಲಿ ಸರ್ವರಿಗೂ ಸಂವಿಧಾನ ಹಾಗೂ ಕೊರೋಣಾ ಜಾಗೃತಿ ನಾಟಕ ಸಿದ್ಧತೆ ಮತ್ತು ತಯಾರಿ ಕಾರ್ಯಕ್ರಮದಲ್ಲಿ ೧೬ನೇ ದಿನದ ಉಪನ್ಯಾಸದಲಿ ಅವರು ಸಮಾಜದಿಂದ ದೂರ ಇರತಕ್ಕಂತಹ ವನವಾಸಿ, ಗಿರಿಜನ, ಯಾರಿಗೆ ಜ್ಞಾನದ ಬಗ್ಗೆ ಕಲ್ಪನೆಯಿಲ್ಲವೂ ಅವರಿಗೆ ಶಿಕ್ಷಣವಂತರನ್ನಾಗಿ ಮತ್ತು ಜ್ಞಾನದ ಅರಿವನ್ನ ಮೂಡಿಸಬೇಕು ಎಂಬ ವಿಚಾರ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಕನಸಾಗಿದೆ ಎಂದರು. ಮತ್ತು ಸಾಮಾಜಿಕ ಕ್ರಾಂತಿ ಸೂರ್ಯ ಡಾ. ಬಾಬಾಸಾಹೇಬ ಅಂಬೇಡ್ಕರ ಎಂಬ ವಿಷಯದ ಬಗ್ಗೆ ವಿಚಾರವನ್ನು ಮಂಡಿಸಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಮಹತ್ವ ಪೂರ್ಣ ನಾಟಕ ಕೇವಲ ದಲಿತ ಕೇರಿ ಜನಾಂಗದವರಿಗೆ ಮಾತ್ರ ಸೀಮಿತವಾಗದೆ ಎಲ್ಲಾ ಜನಾಂಗದವರಿಗೆ ಸೀಮಿತವಾಗಲಿ, ಎಂದು ರಂಗಾಯಣದ ನಿರ್ದೇಶಕ ರಮೇಶ ಎಸ್. ಪರವಿನಾಯ್ಕರ ಅಧ್ಯಕ್ಷೆ ವಹಿಸಿ ಅವರು ಮಾತನಾಡಿದರು.
ಇದೇ ಸಂಧರ್ಭದಲ್ಲಿ ಯಮನಪ್ಪ ಜಾಲಗಾರ, ಕೋರೋನಾ ಜಾಗೃತಿ ನಾಟಕದ ನಿರ್ದೇಶಕ ಮಲ್ಲಪ್ಪ ಹೊಂಗಲ್, ಬಸವರಾಜ ಗುಡ್ಡಪ್ಪನವರ ಹಾಗೂ ಸರ್ವರಿಗೂ ಸಂವಿಧಾನ ನಾಟಕದ ನಿರ್ದೇಶಕ ಬಾಬಾಸಾಹೇಬ ಕಾಂಬ್ಳೆ ಮತ್ತಿತ್ತರು ಉಪಸ್ಥಿತರಿದ್ದರು. ಫಕ್ಕೀರಪ್ಪ ಮಾಧನಬಾವಿ ನಿರೂಪಿಸಿದರು.


Leave a Reply