Belagavi

ನೂತನ ಶಾಲಾ ಕಟ್ಟಡ ಅಡಿಗಲ್ಲು ಸಮಾರಂಭ


ಹಳ್ಳೂರ 17:ಸಮೀಪದ  ಅರಭಾವಿ-ದುರದುಂಡಿ ಸತ್ತಿಗೇರಿ ತೋಟದಲ್ಲಿರುವ ಬಂಡಿಗಣಿ ಶ್ರೀ ಬಸವ ಗೋಪಾಲ ಶಿಕ್ಷಣ ಸಂಸ್ಥೆಯ ನೂತನ ಶಾಲಾ ಕಟ್ಟಡ ಅಡಿಗಲ್ಲು ಸಮಾರಂಭವನ್ನು ಬಂಡಿಗಣಿಯ  ಚಕ್ರವರ್ತಿ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಶ್ರೀಗಳ ಅಮೃತ ಹಸ್ತದಿಂದ ನೆರವೇರಿತು.ಹಾಗೂ ಯುವ ನಾಯಕಿ ಪ್ರಿಯಾಂಕಾ ಸತೀಶ ಜಾರಕಿಹೊಳಿ. ಸರ್ವೋತ್ತಮ ಜಾರಕಿಹೊಳಿ ಮತ್ತು ಕೆ ಎಮ್ ಎಫ್ ಅಧ್ಯಕ್ಷರು ಹಾಗೂ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ.ಸತೀಶ ಕಡಾಡಿ ಯವರಿಂದ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿದರು.                                                    ದಿವ್ಯ ಸಾನಿಧ್ಯ ವಹಿಸಿರುವ ದಾನೇಶ್ವರ ಶ್ರೀಗಳು ಮಾತನಾಡಿ ತಾಯಿ ತಂದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಬುದ್ದಿ, ನೀತಿಯನ್ನು ಕಲಿಸುವದು ಅತೀ ಅವಶ್ಯಕತೆಯಿದೆ.ಮನೆಯಲ್ಲಿ ಹೆಣ್ಮಕ್ಕಳು ಆದರ್ಶಗಳಾದರೆ ಮಕ್ಕಳು ಆದರ್ಶರಾಗುತ್ತಾರೆ. ಸತ್ಪೂರುಷರಿಗೆ ಧರ್ಮವಂತ ರಾಜಕಾರಣಿಗಳಿಗೆ ನಿಂದಾ ಆಡದೆ ಸಹಾಯ ಸಹಕಾರ ನೀಡಬೇಕು ಪಾರಮಾರ್ಥ ರಾಜಕಾರಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.ಅಧಿಕಾರಿಗಳಾಗಲಿ ರಾಜಕಾರಣಿಗಳಾಗಲಿ ಉನ್ನತ ಮಟ್ಟಕ್ಕೆರಲು ಗುರುವಿನ ದಯೆಯಿಂದ ಮಾತ್ರ ಸಾಧ್ಯ. ಕಷ್ಟಕ್ಕೆ ಹೆದರಿ ಜೀವ ಹತ್ಯೆ ಮಾಡಿಕೊಳ್ಳದೆ ಪರಿಹಾರ ಉಡುಕಿಕೊಂಡು ಒಳ್ಳೆಯ ಜೀವನ ನಡೆಸಬೇಕು. ಜಗತ್ತಿನಲ್ಲಿ ಗೊ,ಹತ್ಯೆ ಶಿಶು ಹತ್ಯೆ, ಸಂಪೂರ್ಣ ನಿಷೇದವಾಗಬೇಕು. ಜ್ಞಾನಿಗಳ ಮಾತು ಎಂದಿಗೂ ಹುಸಿಯಾಗುವದಿಲ್ಲ ಎಲ್ಲಾ ಮಠಗಳಲ್ಲಿ ಶ್ರೇಷ್ಠವಾದ ಬಬಲಾದಿ ಮಠವು ಹಿಂದೆ ಆಡಿದ ನುಡಿಯಂತೆ ಮುಖಕ್ಕೆ ಮಾಸ್ಕ ಧರಿಸುವ ಪ್ರಸಂಗ ಬಂದಿದೆ.ಒಬ್ಬರ ಮನಸ್ಸು ಒಬ್ಬರು ನೋಯಿಸಿದೆ ಶುದ್ಧ ಬಾವವನ್ನು ಹೊಂದಿ ಸನ್ಮಾರ್ಗದಲ್ಲಿ ಸಾಗಿರೆಂದು ಹೇಳಿದರು.                 ಯುವ ಮುಖಂಡರಾದ ಸರ್ವೋತ್ತಮ ಜಾರಕಿಹೊಳಿ ಮತ್ತು ಸತೀಶ ಕಡಾಡಿ ಮಾತನಾಡಿ ದುರದುಂಡಿ ಗ್ರಾಮವು ದಾನೇಶ್ವರ ಶ್ರೀಗಳಿಂದ ಉದ್ದಾರವಾಗುತ್ತಿದೆ. ಕೆಲವೇ ವರ್ಷಗಳಲ್ಲಿ ಬಸವ ಗೋಪಾಲ ಶಿಕ್ಷಣ ಸಂಸ್ಥೆ ಪ್ರಾರಂಭ ಮಾಡಿ ಗ್ರಾಮೀಣ ಬಾಗದ ವಿದ್ಯಾರ್ಥಿಗಳಿಗೆ  ಒಳ್ಳೆಯ ಶಿಕ್ಷಣದ ಜೊತೆಗೆ ನೀತಿ ಪಾಠವನ್ನು ಕೂಡಾ  ಕಲಿಸುತ್ತಿದ್ದಾರೆ. ಶ್ರೀಗಳ ಆಶೀರ್ವಾದದಿಂದ ಈ ಶಿಕ್ಷಣ ಸಂಸ್ಥೆಯು ಹೆಮ್ಮರವಾಗಿ ಬೆಳೆಯುತ್ತಿದೆ.ಶಿಕ್ಷಣವೆಂಬುವದು ಮನುಷ್ಯನಿಗೆ ಮೂರನೇ ಕಣ್ಣು ಬದುಕಿನ ದಿಕ್ಕನ್ನು ಬದಲಾಯಿಸುವ ಹಾಗೂ ನಿರಂತರ ದಾಸೋಹ, ಶಿಕ್ಷಣ, ಕಾಯಕ ಧಾರ್ಮಿಕ ಕಾರ್ಯ ಮಾಡುವ ದಾನೇಶ್ವರ ಪೂಜ್ಯರ ಪುಣ್ಯದ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.                       ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ ಮಕ್ಕಳಿಗೆ ವಿದ್ಯೆನೀಡಲು ಮೊದಲು ಆದ್ಯತೆ ನೀಡಬೇಕು. ಸಮಾಜದಲ್ಲಿ ಉನ್ನತ ಮಟ್ಟಕ್ಕೆರಲು ಶಿಕ್ಷಣದ ಅವಶ್ಯಕತೆಯಿದೆ. ಮಠ ಹಾಗೂ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡುವ ದಾನೇಶ್ವರ ಶ್ರೀಗಳ ಸನ್ಮಾರ್ಗದಲ್ಲಿ ಸಾಗಿದರೆ ಒಳ್ಳೇದು ಎಂದು ಹೇಳಿದರು.                     ನೂತನ ಶಾಲಾ ಕಟ್ಟಡ ಅಡಿಗಲ್ಲು ಸಮಾರಂಭದ ಪ್ರಯುಕ್ತ ಭೂದೇವಿ, ದುರ್ಗಾದೇವಿಗೆ ಉಡಿ ತುಂಬಿ ನೈವೈದ್ಯ ನೀಡಿ ಸಹಸ್ರಾರು ಮುತ್ತೈದೆಯರಿಗೆ ಉಡಿತುಂಬಿದರು. ಇದೆ ಸಂದರ್ಭದಲ್ಲಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ  ನಿರ್ದೇಶಕರಾದ ಮೀನಾಕ್ಷಿ ನೆಲಗಳ್ಳಿ.ಪಾಂಡು ಮನ್ನಿಕೇರಿ.ಶಾಂತಮ್ಮ ತಾಯಿ ಬಿಲಕುಂದಿ. ಯಲ್ಲಪ್ಪ ಇಳಿಗೇರ. ಸಿದಗೌಡ ಪಾಟೀಲ. ಕರೆಪ್ಪ ದಡ್ಡಿಮನಿ ಸೇರಿ ಸಹಸ್ರಾರು ಜನರು ಕಾರ್ಯಕ್ರಮದಲ್ಲಿದ್ದರು.


Leave a Reply