Belagavi

ಬೈಲಹೊಂಗಲ :ಸೋಮವಾರ ದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ : ೩೦ ಪರೀಕ್ಷಾ ಕೇಂದ್ರಗಳು, ೪೩೫೫ವಿದ್ಯಾರ್ಥಿಗಳು. ಡಾ. ಹೂಗಾರ


ಬೈಲಹೊಂಗಲ ೧೭ – ಇದೆ ಬರುವ ಸೋಮವಾರ ದಿ. ೧೯ ಹಾಗೂ ಗುರುವಾರ ದಿ. ೨೨ ರಂದು ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯಲಿದ್ದು ಈ ಪರೀಕ್ಷೆಯನ್ನು ಸರ್ಕಾರದ £ಯಮದಂತೆ ನಡೆಸಲು ತಾಲೂಕಿನಲ್ಲಿ ಪೂರ್ವ ಸಿದ್ದತಾ ಕಾರ್ಯಗಳು ನಡೆಯುತ್ತಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಡಾ. ಗುರುನಾಥ ಹೂಗಾರ ತಿಳಿಸಿದರು.
ತಾಲೂಕಿನಲ್ಲಿ ಒಟ್ಟು ೩೦ ಪರೀಕ್ಷಾ ಕೇಂದ್ರಗಳು ಇದ್ದು ಸುಮಾರು ೪೩೫೫ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದು ಇವುಗಳಲ್ಲಿ ೨೩೪೮ ಹುಡುಗರು ೨೦೦೭ ಹುಡುಗಿಯರು ಪರೀಕ್ಷೆಗೆ ಕುಳಿತುಕೊಳ್ಳಲ್ಲಿದ್ದಾರೆ ಇವರಲ್ಲಿ ಪುನಾವರ್ತಿತ ವಿದ್ಯಾರ್ಥಿಗಳು ೩೦೭ ಗಂಡು ೭೧ ಹೆಣ್ಣು ವಿದ್ಯಾರ್ಥಿ ಗಳು ಹಾಗೂ ಖಾಸಗಿ ವಿದ್ಯಾರ್ಥಿಗಳಲ್ಲಿ ೨೯ ಗಂಡು ೭ ಜನ ಹೆಣ್ಣುಮಕ್ಕಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದರು.
ಈಗಾಗಲೇ ೩೦ ಪರೀಕ್ಷಾ ಕೇಂದ್ರಗಳನ್ನು ಸ್ವಚ್ಛಗೊಳಿಸಿ ಸ್ಯಾ£ಟೈಸರ್ ಸಿಂಪರಣೆ ಮಾಡಲಾಗಿದ್ದು ಪ್ರತಿ ಪರೀಕ್ಷಾ ಕೊಠಡಿಗಳಲ್ಲಿ ೧೨ ಜನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಪರೀಕ್ಷೆಗೆ ಬರುವ ಎಲ್ಲ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾ£ಟೈಸರ್ ಕಡ್ಡಾಯವಾಗಿ ಬಳಸಬೇಕು ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಪರೀಕ್ಷಾ ಕೇಂದ್ರದಿAದ ೨೦೦ ಮೀಟರವರೆಗೆ £ಷೇಧಾಜ್ಞೆ ಜಾರಿಗೊಳಿಸಿದ್ದು ಕೇಂದ್ರಗಳ ಸುತ್ತಲೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಬೆಳಿಗ್ಗೆ೧೦-೩೦ರಿಂದ ೧-೩೦ ರ ವರೆಗೆ ನಡೆಯುವ ಈ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಬೆಳಿಗ್ಗೆ ೯ ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಇದ್ದು ವಿದ್ಯಾರ್ಥಿಗಳ ಅರೋಗ್ಯ ತಪಾಸಣೆ ಮಾಡುವರು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಶಿಸ್ತು ಪಾಲನೆಗಾಗಿ ದೈಹಿಕ ಶಿಕ್ಷಕರು ಕಾರ್ಯ £ರ್ವಹಿಸಲಿದ್ದಾರೆ, ಪರೀಕ್ಷೆಗೆ ಬರುವ ಎಲ್ಲ ವಿದ್ಯಾರ್ಥಿಗಳಿಗೆ, ಪಾಲಕರಿಗೆ, ಶಿಕ್ಷಕರಿಗೆ ಪರೀಕ್ಷೆ ಕೊಠಡಿಗಳಲ್ಲಿ ಕಾರ್ಯ£ರ್ವಹಿಸುವವರಿಗೆ ಮಾಸ್ಕ್ ಸ್ಯಾ£ಟೈಸರ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ ಎಂದು ನೂಡಲ್ ಅಧಿಕಾರಿ ಪ್ರಕಾಶ ಮಾಸ್ತಿಹೊಳಿ ನಮ್ಮ ಪ್ರತಿ£ಧಿಗೆ ತಿಳಿಸಿದರು.
ಸೋಮವಾರ ದಿ -೧೯ ರಂದು ಬೆಳಿಗ್ಗ೧೦-೩೦ ರಿಂದ ೧-೩೦ ರ ವರೆಗೆ ನಡೆಯುವ ಈ ಪರೀಕ್ಷೆಯಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಈ ಮೂರು ವಿಷಯಗಳ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆಯಲಿದ್ದಾರೆ.


Leave a Reply