Ballary

ಕಾವಿಗಳ ಕದನ-ಮಧ್ಯರಾತ್ರಿ ಪದಗ್ರಹಣ


ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲುಕಿನ ಪ್ರಸಿದ್ದ ರಾಘವಾಂಕ ಮಠದ ಪಟ್ಟಾಧಿಕಾರ ವಿಚಾರ ವಿವಾದಕ್ಕೆ ಕಾರಣವಾಗಿದೆ.

2009ರಲ್ಲಿ ರಾಘವಾಂಕ ಶಿವಾಚಾರ್ಯ ಮಹಾ ಸ್ವಾಮಿಗಳನ್ನು, ಅಂದಿನ ಪಟ್ಟಾಧಿಕಾರಿಗಳಾಗಿದ್ದ,
ರಾಘವಾಂಕ ಪಂಡಿತಾರಾಧ್ಯ ಸ್ವಾಮಿಗಳು ಮಠಕ್ಕೆ ಪಟ್ಟಾಧಿಕಾರಿಯನ್ನು ನೇಮಕ ಮಾಡಿರುತ್ತಾರೆ. ಅಂದಿನಿಂದ ಇಂದಿನವರೆಗೂ ಹಳೆ ಮಠಾಧೀಶುರು ಮುಂದೆ ವರಿಯುತ್ತ ಬಂದಿದ್ದರು.
ಆದ್ರೆ, 2021ರಲ್ಲಿ ರಾಘವಾಂಕ ಪಂಡಿತ ಆರಾಧ್ಯ ಶಿವಾಚಾರ್ಯರು, ಲಿಂಗೈಕ್ಯರಾದ ನಂತರ.
ಅಂದಿನ ರಾಘವಾಂಕ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಕೆಲ ವಿಷಯಗಳಿಂದ ಮಠದ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು.ಇನ್ನೂ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ,

ಪ್ರಸ್ತುತ ಸ್ವಾಮಿಗಳನ್ನು ಪಟ್ಟಧಿಕಾರಿ ಅಲ್ಲವೆಂದು ನಿರ್ಣಯ ಮಾಡಿಲ್ಲ. ಕಾನೂನು ಉಲ್ಲಂಘನೆ ಮಾಡಿ,ಕುರುಗೋಡು ನಿವಾಸಿಗಳು ಕೆಲವರು ಶ್ರೀಶೈಲ ಜಗದ್ಗುರು ಗಳು, ಡಾ,ಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಗಳು ಉಜ್ಜಯಿನಿ ಸಿದ್ಧಲಿಂಗ ಸ್ವಾಮಿಗಳು, ಸೇರಿಕೊಂಡು ರಾತ್ರೋರಾತ್ರಿ,1ಗಂಟೆ ಸಮಯದಲ್ಲಿ, ಸೂಗೂರೇಶ್ವರ ಪಂಡಿತಾರಾದ್ಯ ಶಿವಾಚಾರ್ಯರನು ಅಕ್ರಮವಾಗಿ  ಉತ್ತರಾಧಿಕಾರಿ ಯನ್ನಾಗಿ ನೇಮಕ ಮಾಡಿದ್ದಾರೆ, ಏಂದು ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿ ಅಸಮಾಧಾನ ಹೊರಹಾಕಿದ್ದು. ಮಠದ ಹೆಸರಲ್ಲಿ,10,ಎಕರೆ ಭೂಮಿ ಲಕ್ಷಾ೦ತರ ಬೆಲೆಬಾಳುವ ಅಸ್ಥಿ ಇದೆ ಮಠಕ್ಕೆ ಆದಾಯವೂ ಇದೆ.

ಜಗದ್ಗುರುಗಳ ಜಗಳ,ಕಾವಿಗಳ ಕಧನ ದಿಂದ ಮತ್ತೊಬ್ಬ ಸ್ವಾಮಿ ಮಠವನ್ನು ತೊರೆದು ಸ್ನೇಹಿತರ ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುವ ಸ್ಥಿತಿ ಬಂದಿದೆ. ಕೊನೆಗೆ ನ್ಯಾಯಾಲಯದ ಆದೇಶ ಉಲ್ಲಂಘನೆ ಎಂದು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡುವ ಮಟ್ಟಕ್ಕೆ ತಲುಪಿದೆ.

(ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ.)


Leave a Reply