Koppal

ಕೋವಿಡ ಲಸಿಕಾ ಆಂದೋಲನಕ್ಕೆ ಚಾಲನೆ


ಕಾರಟಗಿ: ತಾಲೂಕಿನಲ್ಲಿ ಕರ್ನಾಟಕ ಸರಕಾರ ಆರ್ ಡಿ ಪಿ ಆರ್ ಇಲಾಖೆ, ಧ್ವನಿ ಪೌಂಡೇಶನ್ ಬೆಂಗಳೂರು, ಜಿಲ್ಲಾ ಪಂಚಾಯತ ಕೊಪ್ಪಳ ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಸರ್ವೋದಯ ಸಮಗ್ರ ಗ್ರಾಮಿಣಾಭಿವೃದ್ಧಿ ಸಂಸ್ಥೆ ಹಾಗೂ ಮಹಿಳೆ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಕೋವಿಡ ಲಸಿಕಾ ಆಂದೋಲನಕ್ಕೆ ಕನಕಗಿರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಬಸವರಾಜ ಧಡೆಸೂಗುರವರು ಮಾಸ್ಕ್ ಮತ್ತು ಪ್ರಚಾರ ಪತ್ರಗಳನ್ನ ವಿತರಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಕೋವಿಡ್ ಲಸಿಕೆ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಂದ ಭಯಭೀತರಾಗಿರುವ ಗ್ರಾಮೀಣ ಭಾಗದ ಜನ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಎಲ್ಲೆಡೆ ನಡೆಯುತ್ತಿದೆ. ಯಾರೂ ಲಸಿಕೆ ಪಡೆಯಲು ಮುಂದು ಬರುತ್ತಿಲ್ಲ. ಹಾಗಾಗಿ, ಜನರಿಗೆ ಲಸಿಕೆ ಬಗ್ಗೆ ಅರಿವು ಮೂಡಿಸಿ ಜನರಿಗೆ ಲಸಿಕೆ ಕುರಿತು ಆಂದೋಲನ ಜಾಗೃತಿ ಕಾರ್ಯ ಮಾಡುತ್ತೀರುವ ಈ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಹಾಗೂ ಕೃಷಿ, ಸಾಂಸ್ಕೃತಿಕ ಸಂಘದ ನಿರ್ದೇಶಕರಾದ ಶ್ರೀಮತಿ ಲಿಲಾ ಮಲ್ಲೀಕಾರ್ಜುನ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ವೀರೇಶ ಸಾಲೋಣಿ, ಎಪಿಎಂಸಿ ಸದಸ್ಯರಾದ ಸಣ್ಣೆಪ್ಪ ಭಾವಿಕಟ್ಟಿ, ವೇಡ್ಸ್ ಸಂಸ್ಥೆ ಮುಖ್ಯಸ್ಥರಾದ ವಿ ಚಕ್ರಪಾಣಿ, ಜಿಲ್ಲಾ ಸಂಯೋಜಕಾರದ ಮಂಜುನಾಥ ಮಸ್ಕಿ, ರವಿ ಕುಮಾರ, ತಾಲೂಕ ಸಂಯೋಜಕರಾದ ಶರಣಯ್ಯ ಸ್ವಾಮಿ ಸಿದ್ದು ಸೋಮನಾಳ, ಸೌಮ್ಯ ಹಿರೇಮಠ ಹಾಗೂ ಗಣ್ಯರು ಮುಖಂಡರು ಉಪಸ್ಥಿತರಿದ್ದರು.


Leave a Reply