Uncategorized

ಕುಡಿಯುವ ನೀರು ಒದಗಿಸುವಲ್ಲಿ ನಗರ ಸಭೆ ವಿಫಲ, ನೀರಿನ ಕರ ಕೈ ಬಿಡದಿದ್ದರೆ ಕಾನೂನು ಹೋರಾಟ – ಸಿರಾಜ್ ಜಾಫ್ರಿ


ರಾಯಚೂರು ನಗರ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದ್ದು ಆದರೆ ನೀರಿನ ದರವನ್ನು ೨೦೦ರೂ ಹೆಚ್ಚಿಸಿದ್ದು ಇದರಿಂದ ಸರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ನವ ಕರ್ನಾಟಕ ನಿರ್ಮಾಣ ಸಂಘದ ಅಧ್ಯಕ್ಷರಾದ ಸಿರಾಜ್ ಜಾಫ್ರಿ ಅವರು ಹೇಳಿದರು.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೋವಿಡ್ ೧೯ ಸೋಂಕಿನಿಂದ ಜಿಲ್ಲೆಯನ್ನು ಸಂಪೂರ್ಣ ವಾಗಿ ಲಾಕ್ ಡೌನ್ ಮಾಡಿರುವುದರಿಂದ ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು ಆದರೆ ನಗರ ಸಭೆಯ ಕಳೆದ ಸಾಮಾನ್ಯ ಸಭೆಯಲ್ಲಿ ನೀರಿನ ಕರದ ದರವನ್ನು ೨೦೦ ರೂ ಹೆಚ್ಚಿಸಿದ್ದಾರೆ.
ಗೃಹ ಬಳಕೆಯಲ್ಲಿ ಶೇ.೬೦,ಗೃಹೇತರ ಶೇ.೭೦,ವಾಣಿಜ್ಯ ಮತ್ತು ಕೈಗಾರಿಕಾಯಲ್ಲಿ ಶೇ.೮೦ರಷ್ಟು ಬೆಲೆ ಏರಿಕೆ ಮಾಡಿದ್ದಾರೆ ನಗರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸಮಾಪರ್ಕವಾಗಿ ನೀಡಲು ಸಂಪೂರ್ಣ ವಿಫಲವಾಗಿದ್ದು ಆದರೆ ದರವನ್ನು ಹೆಚ್ಚಿಗೆ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷವು ಸೈಕಲ್ ಜಾಥಾ ನಡಿಸಿದರು ಆದರೆ ನಗರ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದುಕೊಂಡು ನೀರಿನ ಕರದ ದರ ಏರಿಸಿ ಜನರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿದರು
ಅನ್ಯ ಜಿಲ್ಲೆಯಲ್ಲಿ ನೀರಿನ ಕರದ ದರ ಕೇವಲ ೧೨೦ ಇದ್ದರೆ ನಮ್ಮ ನಗರ ಸಭೆಯಲ್ಲಿ ೨೦೦ ಗೆ ಮಾಡಿದ್ದಾರೆ ಈ ಕೂಡಲೇ ಜಿಲ್ಲಾಧಿಕಾರಿಗಳು ಪರಿಗಣಿಸಿ ನಿರ್ಣಯವನ್ನು ಕೈಬಿಡಲು ಸೂಚಿಸಿ ರೂಲ್ ಬ್ಯಾಕ್ ಮಾಡಬೇಕು ಹಾಗೂ ನಗರದ ಜನತೆಗೆ ದಿನದ ೨೪ಗಂಟೆಗಳ ಕಾಲ ನೀರು ದೊರೆಯದ ವರೆಗೆ ನೀರಿನ ಕರದ ದರವನ್ನು ಹೆಚ್ಚಿಸಬಾರದು ಇಲ್ಲವಾದಲ್ಲಿ ಕಾನೂನು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಎ.ಎಂ.ಖಾದ್ರಿ, ಖದರ್ ಪಾಷ,ಎಂ.ಡಿ. ಇಸಾಕ್, ನರಸಿಂಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ-ವಿಶ್ವನಾಥ ಸಾಹುಕಾರ
ರಾಯಚೂರು.


Leave a Reply