Uncategorized

ರಾಯಚೂರು ನಗರದಲ್ಲಿ ಹಸಿರೀಕರಣಕ್ಕೆ ನಾಗರೀಕರ ಸಹಕಾರ ಅಗತ್ಯ- ಶಾಸಕ ಡಾ.ಶಿವರಾಜ ಪಾಟೀಲ್


ರಾಯಚೂರು.ಜು.18 – ನಗರದಲ್ಲಿ ಹೆಚ್ಚಿನ ಗಿಡ-ಮರ ಬೆಳೆಸುವ ಮೂಲಕ ತಾಪಮಾನ ನಿಯಂತ್ರಣ ಮತ್ತು ಪರಿಶುದ್ಧ ವಾತಾವರಣಕ್ಕೆ ಪ್ರತಿಯೊಬ್ಬ ನಾಗರೀಕರೂ ಕೈ ಜೋಡಿಸಬೇಕೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಮನವಿ ಮಾಡಿದರು.

ಅವರಿಂದು ನಗರದ ಬೈಪಾಸ್ ರಸ್ತೆಯಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಗರದ ಪ್ರತಿಯೊಬ್ಬ ನಾಗರೀಕರೂ ತಮ್ಮ ಮನೆಗಳ ಮುಂದೆ ಗಿಡ-ಮರ ನೆಡುವ ಮೂಲಕ ನಗರದ ವಾತಾವರಣ ಉತ್ತಮಗೊಳಿಸಲು ಸಹಕರಿಸಬೇಕು. ಈಗಾಗಲೇ ಉತ್ತಮ ಮಳೆಯಿಂದ ಈಗ ಹಾಕಲಾದ ಗಿಡಗಳು ಬೆಳೆಯಲು ಅನುಕೂಲವಾಗಿದೆ. ಈ ಮಳೆ ಹಿನ್ನೆಲೆಯಲ್ಲಿ ಮತ್ತಷ್ಟು ಹೆಚ್ಚಿನ ಗಿಡಗಳನ್ನು ನೆಡುವ ಮೂಲಕ ನಗರದಲ್ಲಿ ಹಸಿರುಮಯ ಹೆಚ್ಚುವಂತೆ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಮತ್ತು ಅರಣ್ಯ ಇಲಾಖೆ ಈ ದಿಕ್ಕಿನಲ್ಲಿ ಹೆಚ್ಚಿನ ಗಮನ ಹರಿಸುವಂತೆ ಮನವಿ ಮಾಡಿದ ಅವರು, ಪ್ರತಿಯೊಬ್ಬರು ಕೊರೊನಾ ಬಗ್ಗೆ ಜಾಗೃತಿ ಮೂಡಿಸಿಕೊಳ್ಳಬೇಕು. ಕೊರೊನಾ ನಮ್ಮನ್ನು ಸಂಪೂರ್ಣವಾಗಿ ಬಿಟ್ಟಿಲ್ಲ, ಮತ್ತೇ ಬರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ನಮ್ಮ ಎಚ್ಚರಿಕೆಯಿಂದ ಇದನ್ನು ತಡೆಯಲು ಸಾಧ್ಯವೆಂದು ಹೇಳಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವೈ.ಗೋಪಾಲ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Leave a Reply