karanataka

ಪರೀಕ್ಷೆಗೆ ಹೆದರದೇ ಹಬ್ಬದಂತೆ ಆಚರಿಸಿ


ಸವದತ್ತಿ: ಪ್ರಧಾನಿ ನರೇಂದ್ರ ಮೋದಿಯವರು ಪರೀಕ್ಷೆಯನ್ನು ಹಬ್ಬದ ರೀತಿ ಆಚರಣೆ ಮಾಡಿ ಎಂದು ಹೇಳಿರುವುದರಿಂದ ಪರೀಕ್ಷೆಯನ್ನು ಹೆದರದೇ ಎದುರಿಸಬೇಕು, ಕೋವಿಡ್ ಬಗ್ಗೆ ಹೆದರದೇ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಪರೀಕ್ಷೆ ಬರೆಯಿರಿ, ಶೈಕ್ಷಣಿಕವಾಗಿ ಎತ್ತರಕ್ಕೆ ಬೆಳೆಯಿರಿ ವಿಧ್ಯಾರ್ಥಿಗಳಿಗೆ ಶುಭವಾಗಲಿ ಎಂದು ವಿಧಾನ ಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಶುಭ ಹಾರೈಸಿದರು.

ಜುಲೈ 19 ಮತ್ತು 20 ರಂದು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಕೋವಿಡ್ 19 ವೈರಸ್ ಬಗ್ಗೆ ಭಯಪಡದೇ, ಪರೀಕ್ಷೆ ಎಂಬುದನ್ನು ಭೂತಾಕಾರವಾಗಿ ತಲೆಯಲ್ಲಿ ತುಂಬಿಕೊಂಡು ಅಧೀರತೆಗೆ ಒಳಗಾಗದೆ, ಆತಂಕ, ಗೊಂದಲಗಳನ್ನೆಲ್ಲಾ ಮನಸ್ಸಿನಿಂದ ಹೊರಹಾಕಿ, ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ.

ನಿಮ್ಮ ಸುರಕ್ಷತೆಗಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ, ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ, ಮಾಸ್ಟ್, ಸಾಮಾಜಿಕ ಅಂತರ ಹಾಗೂ ಪದೇ ಪದೇ ಸ್ಯಾನಿಟೈಜರ್ ಬಳಸಲ ಮರೆಯದಿರಿ. ನಿಮ್ಮೆಲ್ಲರ ಅಗಾಧ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಎಲ್ಲರಿಗೂ ಒಳಿತಾಗಲಿ.
ಎಂದು ವಿಧಾನ ಸಭಾ ಉಪಸಭಾಧ್ಯಕ್ಷರಾದ ಆನಂದ ಮಾಮನಿ ಹೇಳಿದರು.
(ವರದಿ ಈರಣ್ಣಾ ಹುಲ್ಲೂರ ಸವದತ್ತಿ)


Leave a Reply