Uncategorized

ಯುಜಿಸಿಯ ಪರೀಕ್ಷೆಯ ಮಾರ್ಗಸೂಚಿಗೆ ಸ್ವಾಗತ AIDSO ಆಗ್ರಹಿಸಿದ ಬೇಡಿಕೆ ಎತ್ತಿಹಿಡಿದ ಯುಜಿಸಿ – ಅಜಯ್ ಕಾಮತ್


ರಾಯಚೂರು:ರಾಜ್ಯದಲ್ಲಿ ಕಳೆದ ಒಂದು ತಿಂಗಳ ಸಂಘರ್ಷ ಮತ್ತು ಶಿಕ್ಷಣ ತಜ್ಞರ, ಉಪನ್ಯಾಸಕರ, ಶಿಕ್ಷಕರ ಹಾಗೂ ಪೋಷಕರ ನಡುವೆ ವ್ಯಾಪಕ ಚರ್ಚೆ ನಡೆಸಿ, ಹಿಂದಿನ ಸೆಮಿಸ್ಟರ್ ಪರೀಕ್ಷೆ ರದ್ದಾಗಬೇಕು, ಎರಡು ಡೋಸ್ ಉಚಿತ ಲಸಿಕೆ ಆಗುವವರೆಗೂ ಆಫ್ ಲೈನ್ ತರಗತಿ/ಪರೀಕ್ಷೆ ನಡೆಯಬಾರದು ಎಂಬ ಜನಾಭಿಪ್ರಾಯ ಮುಟ್ಟಿಸುವಲ್ಲಿ
ಅಖಿಲ ಭಾರತ ಮಟ್ಟದಲ್ಲಿ AIDSO ಹಲವು ಶಿಕ್ಷಣ ತಜ್ಞರ, ಮಾಜಿ ಉಪಕುಲತಿಗಳು, ಬರಹಗಾರರ ಹಾಗೂ ಜನಸಾಮಾನ್ಯರ ಹಲವು ಹಂತಗಳ ನಡುವೆ ಚರ್ಚೆ ನಡೆಸಿ ಪರೀಕ್ಷೆಯ ಬಗೆಗೆ ಒಂದು ವೈಜ್ಞಾನಿಕ ನಿಲುವು ಮತ್ತು ಅದರ ಪ್ರಕ್ರಿಯೆಗಳ ಬಗ್ಗೆ ಅಖಿಲ ಭಾರತ ಉನ್ನತ ಶಿಕ್ಷಣ ಪರಿಷತ್ ಗೆ ಸಲ್ಲಿಸಿತ್ತು.
ಅದರ ಪರಿಪೂರ್ಣ ಪರಿಶೀಲನೆ ಮತ್ತು ಸಲಹೆಗಳ ಕುರಿತು ಆವಾಗಾಹನೆಗೆ ನೀಡಲಾಗಿತ್ತು.
ಈಗ ಯುಜಿಸಿ ಪರೀಕ್ಷೆಯ ಕುರಿತ ತನ್ನ ಮಾರ್ಗಸೂಚಿಯನ್ನು ಪ್ರಕಟ ಮಾಡಿದೆ ಎಂದು AIDSO ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದರು.

ಅದರ ಪ್ರಕಾರ,
1. ಅಂತಿಮ ಸೆಮಿಸ್ಟರ್ ಪರೀಕ್ಷೆಯನ್ನು ಮಾತ್ರ ಕಡ್ಡಾಯವಾಗಿ ನಡೆಸಬೇಕು.
2.ಮಧ್ಯಂತರ / ವಾರ್ಷಿಕ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದು ಮಾಡಿ ಮತ್ತು ಅವರನ್ನು ಆಂತರಿಕ ಮೌಲ್ಯಮಾಪನ ಅಥವಾ ಹಿಂದಿನ ಸೆಮಿಸ್ಟರ್ ನ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕು.
ಯುಜಿಸಿ ಯ ಈ ವೈಜ್ಞಾನಿಕ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಮತ್ತು ರಾಜ್ಯದ ವಿಶ್ವವಿದ್ಯಾಲಯಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಅನುಸರಿಸಬೇಕು. ಈ ಹಿನ್ನೆಲೆಯಲ್ಲಿ AIDSO ರಾಜ್ಯ ಸಮಿತಿ ಮತ್ತು ವಿದ್ಯಾರ್ಥಿಗಳು ನಮ್ಮ ಹೋರಾಟವನ್ನು ಮುಂದುವರೆಸುತ್ತಿದ್ದೇವೆ. ವಿದ್ಯಾರ್ಥಿಗಳು, ಶಿಕ್ಷಕರು, ಜನಸಾಮಾನ್ಯರ ಆರೋಗ್ಯ ಮತ್ತು ಹಿತಾಸಕ್ತಿಯನ್ನು ಆದ್ಯತೆಯಾಗಿ ಇಟ್ಟುಕೊಂಡು ರಾಜ್ಯ ಸರ್ಕಾರ ಯುಜಿಸಿ ಯ ಮಾರ್ಗಸೂಚಿಯನ್ನು ಅನುಸರಿಸಬೇಕು ಮತ್ತು ಅದರ ಮಾರ್ಗದರ್ಶನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅವುಗಳನ್ನು ಅನುಷ್ಠಾನಕ್ಕೆ ತರಬೇಕು. ಇದರೊಂದಿಗೆ ಬಹುಮುಖ್ಯವಾಗಿ, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ, ಯುಜಿಸಿಯು ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆ ಮಾತ್ರ ನಡೆಸಬೇಕು ಎಂದು ಹೇಳಿದೆ. ಹೀಗಿರುವಾಗ, ಇದರ ಹೊರತಾಗಿ ಬೇರೆ ಪರೀಕ್ಷೆಗಳನ್ನು ನಡೆಸುವುದು ಅವೈಜ್ಞಾನಿಕ ಮಾತ್ರವಲ್ಲ ಕಾನೂನುಬಾಹಿರ ಕೂಡ ಆಗುತ್ತದೆ. ರಾಜ್ಯ ಸರ್ಕಾರ ಈ ಕೂಡಲೇ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿ – ಶಿಕ್ಷಣದ ಪರವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಾ, ನಮ್ಮ ಹೋರಾಟ ಬಲಿಷ್ಟಗೊಳ್ಳಬೇಕಿದೆ ಎಂದರು.

ವರದಿ-ವಿಶ್ವನಾಥ ಸಾಹುಕಾರ

ರಾಯಚೂರು.


Leave a Reply