karanatakakarwar uttar kannada

ಕೋವಿಡ್ ಎರಡನೇ ಅಲೆ ಸಂಪೂರ್ಣ ಮುಕ್ತಾಯ: ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕ


ದಾವಣಗೇರಿ:ಕಳೆದ ಮೂರು ತಿಂಗಳಿನಿಂದ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಹಗಲಿರುಳು ನಿರಂತರವಾಗಿ ನನ್ನ ಬಂಧುಗಳ ರಕ್ಷಣೆಗಾಗಿ ಶ್ರಮಿಸಿದ್ದು, ಅನೇಕ ಸಾವುನೋವುಗಳು ಸಂಭಾವಿಸಿದ್ದು ನನ್ನ ಮನಸ್ಸಿಗೆ ತೀವ್ರ ನೋವುಂಟಾಗಿದೆ.

ಎರಡನೇ ಅಲೆಯ ಸಂದರ್ಭದಲ್ಲಿ ವೈಯಕ್ತಿಕವಾಗಿ 4 ಆಂಬುಲೆನ್ಸ್, 50 ಕಾಟ್ & ಬೆಡ್ ಹಾಗೂ ಪ್ರತಿದಿನ ಹೊನ್ನಾಳಿ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ಸೊಂಕಿತರಿಗೆ, ಚಿಕಿತ್ಸೆ ಪಡೆಯಲು ಆಗಮಿಸುವ ಸಾರ್ವಜನಿಕ ಬಂಧುಗಳಿಗೆ ಹಾಗೂ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಸಾವಿರಾರು ಸಾರ್ವಜನಿಕ ಬಂಧುಗಳಿಗೆ ಬೆಳಗ್ಗಿನ ಮತ್ತು ಮಧ್ಯಾಹ್ನದ ಉಪಹಾರ ಸೇವೆಕಾರ್ಯವನ್ನು ಮಾಡಿದ್ದೇನೆ.

ಅರಬಗಟ್ಟೆ ಕೋವಿಡ್ ಆರೈಕೆ ಕೇಂದ್ರದಲ್ಲಿ ಪ್ರತಿದಿನ ಸೋಂಕಿತ ಬಂಧುಗಳ ಜೊತೆ ಯೋಗಾಭ್ಯಾಸ ಮಾಡಿ, ಉಪಹಾರ ಬಡಿಸಿ, ಕ್ಷೇತ್ರದ ಪ್ರವಾಸದ ನಂತರ, ಮಧ್ಯಾಹ್ನದ ಊಟ ಬಡಿಸಿ, ಅವರಿಗಾಗಿ ಸಂಜೆ ರಸಮಂಜರಿ ಕಾರ್ಯಕ್ರಮ ಆಯೋಜಿಸಿ ಆಯೋಜಿ ರಾತ್ರಿ ಊಟ ಬಡಿಸಿ ಅಲ್ಲೇ ವಾಸ್ತವ ಮಾಡಿದ್ದೇನೆ. ಕಳೆದ ಎರಡು ತಿಂಗಳಿನಿಂದ ಯೋಗಾಭ್ಯಾಸ ಮಾಡಿಸಿದ ಯೋಗ ಗುರುಗಳಿಗೂ, ಮನೋರಂಜನಾ ಕಾರ್ಯಕ್ರಮ ನಡೆಸಿಕೊಟ್ಟ ಪ್ರತಿಯೊಬ್ಬ ಕಲಾವಿದರು ತುಂಬು ಹೃದಯದ ಧನ್ಯವಾದಗಳು.

ಕೋವಿಡ್ ಸಂದರ್ಭದಲ್ಲಿ ನಿರಂತರವಾಗಿ ಸೇವೆಸಲ್ಲಿಸಿದ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ದಾದಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಸತಿ ಶಾಲೆಯ ಸಿಬ್ಬಂದಿಗಳು, ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಹಾಗೂ ಸಹಕರಿಸಿದ ಪ್ರತಿಯೊಬ್ಬ ಕೋವಿಡ್ ಸೊಂಕಿತ ಬಂಧುಗಳಿಗೆ, ನನ್ನ ಆಪ್ತ ಸಹಾಯಕ ಸಿಬ್ಬಂದಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ವರದಿ-ಆರ್ ಶರಣಪ್ಪ ಗುಮಗೇರಾ

ಕೊಪ್ಪಳ

 

 


Leave a Reply