Koppal

ಏಣಿ ಏರಿ ಶಾಲಾ ಮೇಲ್ಛಾವಣಿ ವೀಕ್ಷಿಸಿದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ.


ಕುಷ್ಟಗಿ:ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ಸರಕಾರಿ ಪದವಿ ಪೂರ್ವ ಜೂನಿಯರ್ ಕಾಲೇಜ್ ಗೆ ಬೇಟಿ ನೀಡಿದ ಶಾಸಕರು ಸುಮಾರು ೫೦ ವರ್ಷಗಳ ಹಿಂದಿನ ಹಳೆ ಶಾಲಾ ಕಟ್ಟಡಗಳು ಸುಮಾರು ಮೂರು ದಿನದಿಂದ ಸತತವಾಗಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಹಳೆ ಕಟ್ಟಡಗಳು ಸೋರುತ್ತಿದ್ದು ಕಟ್ಟಡಗಳನ್ನು ನೋಡಲು ಶಾಸಕರು ತಾವೇ ಸ್ವತ ಮೇಲ್ಛಾವಣಿ ನೋಡಲು ಏಣಿ ಏರಿ ಶಾಲಾ ಕಟ್ಟಡವನ್ನು ಪರೀಶಿಲನೆ ನಡೆಸಿದರು.

ನಂತರ ಮಾತನಾಡಿದ ಶಾಸಕರು ಶಾಲಾ ಸುಧಾರಣೆಗಾಗಿ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕಾಗಿ ಸುರಕ್ಷಿಯ ಶಾಲಾ ಕಟ್ಟಡ ನಿರ್ಮಾಣ ಮಾಡಲು ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವದಾಗಿ ಹೇಳಿದರು.

ವರದಿ-ಶೇಖರ್ ಎಸ್ ಕನಸಾವಿ.

ಕುಷ್ಟಗಿ

 


Leave a Reply