Koppal

ಟಿಬಿ ಮುಕ್ತ ಏರಿಯಾ ಅಭಿಯಾನದಿಂದ ಕ್ಷಯ ಮುಕ್ತ ಸಮಾಜ ನಿರ್ಮಾಣ ಸಾಧ್ಯ- ವೆಂಕಟೇಶ್ ಗುಡಗುಡಿ


ಕುಷ್ಟಗಿ: ನಗರದ ಭಾಗ್ಯದ ಹನುಮಂತ ದೇವರ ಆವರಣದಲ್ಲಿ ಜಿಲ್ಲಾಡಳಿತ ಕೊಪ್ಪಳ, ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ಕೊಪ್ಪಳ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಕುಷ್ಟಗಿ, ಹಾಗೂ KHPT ಸಹಯೋಗದಲ್ಲಿ ಆಯೋಜಿಸಿದ್ದಟಿಬಿ ಮುಕ್ತ ಏರಿಯಾ ಅಭಿಯಾನ ಅಂದೋಲನ ದಲ್ಲಿ
ತಾಲೂಕ ಕ್ಷಯರೋಗ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ವೆಂಕಟೇಶ್ ಗುಡಗುಡಿ ಮಾತನಾಡಿ 2025 ರವಳಗೆ ಕ್ಷಯ ಮುಕ್ತ ಭಾರತ ಮಾಡುವಲ್ಲಿ ಭಾರತ ಸರ್ಕಾರ ಗುರಿ ಹೊಂದಿದ್ದು, ಅದು ಸಕಾರಗೊಳ್ಳಲು ಸ್ಥಳೀಯವಾಗಿ ಜನರಿಗೆ ಜಾಗೃತಿ ಅವಶ್ಯಕತೆ ಇದ್ದು, ಆ ದಿಸೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದನ್ನು ತಿಳಿದು ಸ್ವತಃ ಜನರೇ ಟಿಬಿ ಕೋನೆಗಾಣಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕಿದೆ…
ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೇ ಮೊದಲಿಗೆ ಕುಷ್ಟಗಿ ನಗರದಲ್ಲಿ ಟಿಬಿ ಮುಕ್ತ ಏರಿಯಾ ಅಭಿಯಾನದಡಿಯಲ್ಲಿ ಕ್ಷಯ ಮುಕ್ತ ಮಾಡಲು ಮೊದಲ ಹೆಜ್ಜೆ ಹಾಕಿದ್ದು, ನಿಮ್ಮೇಲ್ಲರ ಸಹಾಯದೊಂದಿಗೆ ಸಹಕಾರಗೊಳ್ಳಲಿ ಎಂದರು.

ತಾಲ್ಲೂಕು ಕ್ಷಯರೋಗ ಆರೋಗ್ಯ ಪರಿವೀಕ್ಷಕ ವೀರಭದ್ರಪ್ಪ ಗಂಗನಾಳ ಮಾತನಾಡಿ ಕ್ಷಯ ರೋಗದ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿ ನೀಡುತ್ತಾ, ಕ್ಷಯ ಮುಕ್ತ ಕುಷ್ಟಗಿ ಮಾಡುವಲ್ಲಿ ನಮ್ಮ ಕಾರ್ಯ ಆರಂಭವಾಗಿದೆ, ಸಮುದಾಯ ಕೈ ಜೋಡಿಸಬೇಕು ಎಂದರು.

ತಾಲ್ಲೂಕು ಹಿರಿಯ ನಿರೀಕ್ಷಣಾ ಅಧಿಕಾರಿ ಸುಶೀಲಾ* ಮಾತನಾಡಿ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಕ್ಷಯ ಪತ್ತೆಗೆ ಇರುವ ಸಿಬಿನಾಟ್ ಕಫ ಪರೀಕ್ಷಾ ಯಂತ್ರದ ಉಪಯೋಗ ಮಾಡಿಕಳ್ಳಿ, ತಾಲೂಕಿನಲ್ಲಿಯೆ ಟಿಬಿ ಮುಕ್ತ ಏರಿಯಾ ಅಭಿಯಾನ ಅಮ್ಮಿಕೊಂಡಿರುವುದು ಕ್ಷಯ ಮುಕ್ತ ಕುಷ್ಟಗಿ ಮಾಡುವಲ್ಲಿ ಸಹಕಾರಿ ಎಂದರು.

ಕಾರ್ಯಕ್ರಮದಲ್ಲಿ KHPT ಶೋಭಾ ಅವರು ಗಣ್ಯರನ್ನು ಸ್ವಾಗತಿಸಿ ಮತ್ತು ವಂದಿಸಿದರು.

ಕಾರ್ಯಕ್ರಮದಲ್ಲಿ ಕುಷ್ಟಗಿ ಆರೋಗ್ಯ ಕೇಂದ್ರದ ಸಿಬ್ಬಂದಿ ಕಿರಿಯ ಆರೋಗ್ಯ ಸಹಾಯಕಿ ಶಿಲ್ಪಾ, ಆಶಾ ಕಾರ್ಯಕರ್ತೆಯರು, ಧರ್ಮಸ್ಥಳ ಸ್ವ-ಸಹಾಯ ಸಂಘಗಳ ಅಧಿಕಾರಿಗಳಾದ ನಾಗರಾಜ, ಚನ್ನವೀರಪ್ಪ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ವರದಿ-ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply