Belagavi

ಸಂಘಮೇಶ್ವರ ನಗರದಲ್ಲಿ ಡ್ರೇನ್ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಅನಿಲ ಬೆನಕೆ


ಬೆಳಗಾವಿ: ದಿ೨೦ ರಂದು ಶಾಸಕ ಅನಿಲ ಬೆನಕೆ ಹಾಗೂ ಸಂಘಮೇಶ್ವರ ನಗರ ರಹಿವಾಸಿಗಳು ಮಹಾನಗರ ಪಾಲಿಕೆಯ ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ಡ್ರೇನ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸುವ ಮುಖಾಂತರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ ಮಾತನಾಡುತ್ತ ಸಂಘಮೇಶ್ವರ ನಗರದ ರಹವಾಸಿಗಳ ಬಹುದಿನಗಳ ಬೇಡಿಕೆ ಪ್ರಕಾರ ಇಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಬಡಾವನೆಯಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಈಗಾಗಲೆ ಅನುಷ್ಠಾನಕ್ಕಾಗಿ ಅಳವಡಿಸಿದ್ದು ಶಿಘ್ರದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಜನರು ಸಹಕರಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಶ್ರೀ. ಅನುಪ ಕಾಟೆ, ಶ್ರೀ. ಉಮೇಶ ಹಿರೇಮಠ, ಹಾಗೂ ಸಂಘಮೇಶ್ವರ ನಗರ ರಹಿವಾಸಿಗಳು ಉಪಸ್ಥಿತರಿದ್ದರು.


Leave a Reply