Belagavi

*ಶ್ರಮ ಒಂದೇ ಸಾಧನೆಗೆ ಮಹಾ ಮಾರ್ಗ**


 

 

ಬೈಲಹೊಂಗಲ 20: ಸತತ ಪ್ರಯತ್ನ ಮತ್ತು ನಿರಂತರ ಅಧ್ಯಯನ ಹಾಗೂ ಆತ್ಮ ವಿಶ್ವಾಸ ಒಂದಿದ್ದರೆ ಸಾಕು ಎಂಥಹ ಗುರಿಯನ್ನಾದರು ಮುಟ್ಟಲು ಸಾಧ್ಯ ಎಂಬುದನ್ನು ಗಂಡು ಮೆಟ್ಟಿನ ನಾಡು ಬೈಲಹೊಂಗಲ ತಾಲೂಕಿನ ಜಕನಾಯನಕೊಪ್ಪ ಗ್ರಾಮದ ಹೆಮ್ಮೆಯ ಮಾಜಿ ಸೈನಿಕ ಶ್ರೀ ಅಶೋಕ ದುಂಡಪ್ಪ ಗಡ್ಡಿಗೌಡರ ತೋರಿಸಿಕೊಟ್ಟಿದ್ದಾರೆ.

ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾದ ಅವರು ಸ್ವಗ್ರಾಮ ಹಾಗೂ ಹಣ್ಣಿಕೇರಿಯಲ್ಲಿ ಕನ್ನಡ ಮಾದ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ವ್ಯಾಸಂಗ ಮಾಡಿ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ  ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ ಕೀರ್ತಿ ಇವರದಾಗಿದೆ.ಮೂರು ವರ್ಷ ನೇಸರಗಿಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್ ನಲ್ಲಿ ಇದ್ದು  ಪ್ರತಿಷ್ಠಿತ ವಿದ್ಯಾಮಂದಿರ  ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪ್ರಥಮ ದರ್ಜೆಯಲ್ಲಿ ಪೂರೈಸಿಕೊಂಡು, ನಂತರ ಬೈಲಹೊಂಗಲದ ಕೆ .ಆರ್. ಸಿ. ಎಸ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿಕೊಂಡು ದೇಶ ಸೇವೆಯ ಕನಸು ಕಂಡು ಭಾರತೀಯ ಸೈನ್ಯ ಸೇರುತ್ತಾರೆ.

ಭಾರತೀಯ ಸೈನ್ಯದಲ್ಲಿ ಏರೋನಾಟಿಕಲ್ ಇಂಜನಿಯರ್ ಆಗಿ ಹದಿನೈದು ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸುತ್ತಾರೆ. ಹಾಗೂ ಇವರು  ಸೈನ್ಯದಲ್ಲಿ ಇದ್ದಾಗಲೇ ಕರ್ನಾಟಕ ವಿಶ್ವ ವಿದ್ಯಾ ನಿಲಯದಿಂದ ಬಿ. ಎ  ಪದವಿ ಮತ್ತು ಮತ್ತು ಇಂಗ್ಲೀಷ್  ಭಾಷೆಯಲ್ಲಿ ಎಂ.ಎ ಪದವಿ ಪಡೆದ ಇವರು.ನಂತರ ಇತಿಹಾಸ ವಿಷಯದಲ್ಲಿ ಎಂ .ಎ ಪದವಿ ಪಡೆದುಕೊಂಡಿರುವುದು ವಿಶೇಷ.  ಅಷ್ಟೇ ಅಲ್ಲದೆ ಸರ್ಕಾರಿ ಪದವಿ ಕಾಲೇಜು ಹುದ್ದೆಗೆ ಅರ್ಹತಾದಾಯಕ ಪರೀಕ್ಷೆಯಾದ ಸ್ಲೇಟ್ ಪರೀಕ್ಷೆಯನ್ನು ಉತ್ತೀರ್ಣರಾಗಿರುವದು ಅವರ ಶ್ರಮ ಮತ್ತು ಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ.

ಇವರು ಸೈನ್ಯದಿಂದ ನಿವೃತಿ ಪಡೆದು ತಮ್ಮ ಸುಂದರ ಕುಂಟುಂಬ ಹೆಂಡತಿ ಹಾಗೂ ಇಬ್ಬರು ಗಂಡು ಮಕ್ಕಳೊಂದಿಗೆ ಹಾಯಾಗಿ ಕಾಲ ಕಳೆಯಬಹುದಿತ್ತು ಆದರೆ ಅವರು ಹಾಗೆ ಮಾಡದೆ ತಾವು ಚಿಕ್ಕವರಾಗಿದ್ದಾಗ ಅನುಭುವಿಸಿದ ಕಷ್ಟ ನೋವುಗಳನ್ನು ಮನಸಿನಲ್ಲಿಟ್ಟುಕೊಂಡು ಸಮಾಜ ಹಾಗೂ ಬಡ ಮಕ್ಕಳಿಗೆ ಸಹಾಯ ಮಾಡುವ ಸದುದ್ದೆಶದೊಂದಿಗೆ, ಕೆಲ ದಿನಗಳ ಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗೆ  ಸನ್ನದ್ಧರಾಗಿ ನಿರಂತರವಾಗಿ  ಕೆ .ಎಸ್. ಆರ್. ಪಿ.  ಪಿ ಎಸ್.  ಐ, ರಿಸರ್ವ್ ಪಿ ಎಸ್. ಐ  , ಅಬಕಾರಿ ಇಲಾಖೆಯ ಸಬ್  ಇನ್ಸ್ಪೆಕ್ಟರ್ ಮತ್ತು  ಸಿವಿಲ್ ಪಿ ಎಸ್. ಐ ಆಗಿ ನೇಮಕವಾಗುತ್ತಾರೆ.   ಪೊಲೀಸ್ ಇಲಾಖೆಯಲ್ಲಿ ಸಿವಿಲ್ ಪಿ ಎಸ್. ಐ ಆಗಿ  ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ  ಅವರು, ಈಗ ಸದ್ಯ  ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆಗಿ ನೇಮಕಗೊಂಡಿದ್ದಾರೆ. ಕಠಿಣ ಪರಿಶ್ರಮ ಮತ್ತು ನಿತ್ಯ ಅಧ್ಯಯನ ಹಾಗೂ ಛಲ, ಆತ್ಮ ವಿಶ್ವಾಸ ಇಟ್ಟುಕೊಂಡು ಮುನ್ನುಗ್ಗುವ ಮನಸಿದ್ದರೆ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯ ಎನ್ನುವದನ್ನು  ಅವರು ತೋರಿಸಿಕೊಟ್ಟಿದಾರೆ.  ಅವರು ಇನ್ನೂ ಅನೇಕ ಉನ್ನತ ಹುದ್ದೆಗಳ ಆಕಾಂಕ್ಷಿ ಆಗಿದ್ದು ಅದರ ತಯಾರಿ ಅಲ್ಲಿ ಇದ್ದಾರೆ.  ಹಾಗೂ ಅನೇಕ ಸ್ಪರ್ಧಾ ಮನಸುಗಳಿಗೆ ಮಾದರಿಯಾಗಿ ಸ್ಫೂರ್ತಿಯಾಗಿದ್ದಾರೆ. ಅವರ ಈ ಸಾಧನೆಗೆ ಕುಟುಂಬ ವರ್ಗ, ಗುರು ವೃಂದ, ಸ್ನೇಹಿತ ಬಳಗ, ಗ್ರಾಮದವರು ಹಾಗೂ  ಮಾಜಿ ಸೈನಿಕರ ಬಳಗದವರು ಅಭಿನಂದಿಸಿದ್ದಾರೆ.


Leave a Reply