Belagavi

ಮೊಟ್ಟ ಮೊದಲ ಬಾರಿಗೆ ಜಾನಪದ ಗಾನಸುಧೆ ಕಾರ್ಯಕ್ರಮ


ಬೈಲಹೊಂಗಲ ೨೦: ಕ.ಸಾ.ಪ. ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕು ಕಸಾಪ ಘಟಕಗಳ ಸಹಯೋಗದೊಂದಿಗೆ “ಜಾನಪದ ಗಾನಸುಧೆ” ಕಾರ್ಯಕ್ರಮ ಶನಿವಾರ ದಿ:೧೭ ರಂದು ಶೈಲಜಾ ಭಿಂಗೆ ಇವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಭಾರತಿ ಮಠದ ನಿವೃತ್ತ ಪ್ರಿನ್ಸಿಪಾಲರು ಚಂದ್ರಗಿರಿ ಬಿಎಡ್ ಕಾಲೇಜ ಬೆಳಗಾವಿ ಇವರು ಆಗಮಿಸಿದ್ದರು. ಅಧ್ಯಕ್ಷತೆಯನ್ನು ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ ಅವರು ವಹಿಸಿದ್ದು, ಇದೇ ರೀತಿ ವೆಬಿನಾರ್ ಮೂಲಕ ಇನ್ನೂ ಈ ಬರುವ ಶನಿವಾರ ಸಾಯಂಕಾಲ ೪ ಗಂಟೆಗೆ, ಜಾನಪದ ಗಾನಸುಧೆ ಇದೇ ವಿಷಯದೊಂದಿಗೆ ತೇಲಿ ಬರಲಿದೆ ಎಂದು ಹೇಳಿದರು. ಜಯಾ ಚುನಮರಿ ಜಿಲ್ಲಾಧ್ಯಕ್ಷರು, ಸಿರಿಗನ್ನಡ ಮಹಿಳಾ ವೇದಿಕೆ ಗೌರವ ಉಪಸ್ಥಿತಿಯಲ್ಲಿದ್ದರು.ಸರೋಜಾ ನಿಶಾನದಾರ, ಇವರು ಗುಳ್ಳವ್ವನ ಪದ ಹಾಡಿದರು. ಗಿರಿಜಾ ಹಟ್ಟಿಹೊಳಿ, ಶಿವಾನಂದ ವಸೇದಾರ, ಎಂ.ಎಸ್.ಹೊAಗಲ, ಬೀನಾ ಕತ್ತಿ, ಶೈಲಜಾ ಸನಸುದಿ, ಇವರಿಂದ ಸುಂದರವಾದ ಗಂಡ-ಹೆAಡತಿ ಕುರಿತು ಜಾನಪದ ಗೀತೆಗಳು ಸುಮಧುರವಾಗಿ ಮೂಡಿಬಂದವು. ಪಾಂಡುರAಗ ಜಟಗನ್ನವರ ಅಧ್ಯಕ್ಷರು ಕಸಾಪ ರಾಮದುರ್ಗ ಇವರು ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಭಾ ಕಳ್ಳಿಮಠ ಅವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಣೆಯನ್ನು ಮಾಡಿದರು. ಕಸಾಪ ಬೆಳಗಾವಿ ಜಿಲ್ಲೆ ಕೋಶಾಧ್ಯಕ್ಷರಾದ ರತ್ನಪ್ರಭಾ ಬೆಲ್ಲದ ಹಾಗೂ ಕಾರ್ಯದರ್ಶಿಗಳು ಎಂ.ವಾಯ್ ಮೆಣಸಿನಕಾಯಿ, ಜ್ಯೋತಿ ಬದಾಮಿ, ರಜನಿ ಜಿರಗ್ಯಾಳ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ಅಧ್ಯಕ್ಷರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


Leave a Reply