Belagavi

ಜಾನಪದ ಗಾನಸುಧೆ ಕಾರ್ಯಕ್ರಮ


ಬೆಳಗಾವಿ:೨೨-ಕ.ಸಾ.ಪ. ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕು ಕಸಾಪ ಘಟಕಗಳ ಸಹಯೋಗದೊಂದಿಗೆ ಶನಿವಾರ ದಿನಾಂಕ:೨೪/೦೭/೨೦೨೧ ರಂದು ಸಂಜೆ ೪:೦೦ ಗಂಟೆಗೆ, “ಜಾನಪದ ಗಾನಸುಧೆ” ಕಾರ್ಯಕ್ರಮದ ಮಾಲಿಕೆ-೪ ನಡೆಯಲಿದೆ.
ವೆಬಿನಾರ್ ಮೂಲಕ ನಡೆಯುವ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ.ವಿಜಯಲಕ್ಷಿö್ಮ ಪುಟ್ಟಿ ಪ್ರೊಫೆಸರ್ ಮರಾಠಾ ಮಂಡಳ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಬೆಳಗಾವಿ ಇವರು ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ವಹಿಸಲಿದ್ದು, ಶ್ರೀಮತಿ.ಪ್ರತಿಭಾ ಕಳ್ಳಿಮಠ ಅವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಣೆಯನ್ನು ಮಾಡಲಿದ್ದಾರೆ.
ಶ್ರೀಮತಿ.ಅನ್ನಪೂರ್ಣ ಅಗಡಿ, ಶ್ರೀಮತಿ.ಲತಾ ಸಂದೀಪ, ಶ್ರೀ.ಡಿ.ವೀ.ಹಿರೇಮಠ, ಶ್ರೀಮತಿ.ಸುಮಾ ಮದೀಹಳ್ಳಿ, ಶ್ರೀಮತಿ.ಮಲಪ್ರಭಾ ಪಾಟೀಲ ಇವರೆಲ್ಲರೂ ಗಾಯಕರಾಗಿ ಆಗಮಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಸಾಪ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು ಮತ್ತು ಎಲ್ಲ ತಾಲೂಕಿನ ಕಾರ್ಯಕಾರಿ ಸಮೀತಿಯ ಸರ್ವ ಸದಸ್ಯರು ಹಾಗೂ ಜಿಲ್ಲಾ ಕಾರ್ಯಕಾರಿ ಸಮೀತಿಯ ಸರ್ವ ಸದಸ್ಯರು ಹಿರಿಯ-ಕಿರಿಯ ಸಾಹಿತಿಗಳು, ಕಲಾವಿದರು, ಮತ್ತು ಸಮಸ್ತ ಕನ್ನಡಾಭಿಮಾನಿಗಳು ಈ ಕೆಳಗಿನ ಕೊಂಡಿಯನ್ನು ಬಳಸಿಕೊಂಡು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಮತ್ತು ಜಿಲ್ಲಾ ಕಾರ್ಯಕಾರಿ ಸಮೀತಿಯ ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Leave a Reply