Ballary

ಶ್ರೀರಾಮುಲು ಡಿಸಿ ಎಂ ಕನಸು : ಹಾಲಿ ಸಚಿವರು ಗಪ್ಪ್ ಚುಪ್ ಹೈ ಖಡಕ್ ವಾರ್ನ್


ಬಳ್ಳಾರಿ : ರಾಜ್ಯ ಬಿಜೆಪಿ ವಲಯದಲ್ಲಿ ಬುಗಿಲೆದ್ದಿರುವ, ಮುಖ್ಯಮಂತ್ರಿ ಬದಲಾವಣೆ ನಾಟಕದಲ್ಲಿ  ರಾಮುಲು ಪಾತ್ರ ಇಲ್ಲ…!! ?

ಪ್ರಸ್ತುತ ವಿದ್ಯಮಾನಗಳ ನಡುವೆ ರಾಮುಲು ದೆಹಲಿ ಪ್ರವಾಸ, ಹೈಕಮಾಂಡ್‌ನ ಯಾವುದೇ ಸೂಚನೆ ಇಲ್ಲ.
ಯಾವುದೋ ಖಾಸಗಿ ವಿಚಾರಕ್ಕೆ ದೆಹಲಿಗೆ ಹೋಗಿದ್ದು, ಹಿರಿಯ ನಾಯಕರನ್ನ ಭೇಟಿ ಮಾಡುವುದಕ್ಕಲ್ಲ.
ಅಕಸ್ಮಿಕವಾಗಿ ನಾಯಕರನ್ನ ಭೇಟಿ ಮಾಡಿರಬಹುದು.
ಯಾವುದೇ, ರಾಜಕೀಯ ಸ್ಥಾನಮಾನಗಳ ಬಗ್ಗೆ ಚರ್ಚೆ ನಡೆದಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇನ್ನು, ಹಾಲಿ ಸಚಿವರು ಯಾವುದೇ ಸ್ಥಾನ ಮಾನಗಳಿಗೆ ಬೇಡಿಕೆ ಇಡುವಂತಿಲ್ಲ.
ಬೇಡಿಕೆ ವಿಚಾರವಾಗಿ ಏನಾದ್ರು ಕಂಡು ಬಂದಲ್ಲಿ “ಗೇಟ್ ಪಾಸ್” ಖಚಿತ ಎನ್ನುವಂತ, ಖಡಕ್ ವಾರ್ನಿಂಗ್ ಹೈ ಕಮಾಂಡ್ ರವಾನಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ರಾಮುಲು ಡಿಸಿಎಂ ಸ್ಥಾನಕ್ಕಾ ಈ ಹಿಂದೆ ಶತ ಪ್ರಯತ್ನ ಎಲ್ಲವು ವ್ಯೆರ್ಥವಾಗಿದ್ದು. ಈ ಬಾರಿ ಹೈ ಕಮಾಂಡ್ ವಲಯದಲ್ಲಿ ರಾಮುಲು ಇಮೇಜ್ ಅಷ್ಟಕ್ಕಷ್ಟೆ ಎನ್ನಾಗಿದ್ದು. ಇನ್ನು ಕರೆದು ಮಾತನಾಡುವ ವಾತವರಣ ದೆಹಲಿಯಲ್ಲಿ ಇಲ್ಲ ಎನ್ನುವುದು ಪಕ್ಷದ ಹಿರಿಯರ ಬಾಯಲ್ಲಿದೆ.

ಹೀಗಾಗಿ ರಾಮುಲು, ಜನಾರ್ಧನ್ ರೆಡ್ಡಿ ಹೊಸಾ ಪಕ್ಷ ಹುಟ್ಟು ಹಾಕುವ ವಾಸನೆ ಬಿಜೆಪಿ ಹೈ ಕಮಾಂಡ್‌ಗೂ ತಲುಪಿದೆಯಂತೆ.
ಅಷ್ಟೆ ಅಲ್ಲ, ರಾಮುಲು ಟೀಮ್‌ಗೆ ಕೈ ತಪ್ಪಿದ್ದ ತವರು ಕ್ಷೇತ್ರ. ಬಳ್ಳಾರಿ ಗ್ರಾಮೀಣದಿಂದ ಕಣಕ್ಕಿಳಿಯಲು ಅಣಿಯಾಗಿರುವ ವಿಚಾರವು ಕೇಂದ್ರ ಬಿಜೆಪಿ ನಾಯಕರಿಗೆ ರವಾನೆಯಾಗಿದ್ದು, ಶ್ರೀರಾಮುಲು ಡಿಸಿಎಂ
ಕನಸು ಇನ್ನು ಕನಸಾಗೇ ಉಳಿಯಲಿದೆ ಎನ್ನುವುದು ಬಳ್ಳಾರಿ ಅಭಿಮಾನಿಗಳಿಂದಲೆ ಗುಸು ಗುಸು ಗಾಳಿ ಎದ್ದಿರುವುದು ತೆರೆದ ಸತ್ಯವಾಗಿದೆ.
(ವರದಿ, ಕೆ.ಬಜಾರಪ್ಪ ಬಳ್ಳಾರಿ)


Leave a Reply