Belagavi

ಜಗದ್ಗುರು  ರೇಣುಕ  ಜ್ಯೋತಿ ಕಟ್ಟಡ  ಉದ್ಘಾಟನೆ ಸಮಾಜದ ಉದ್ದಾರಕ್ಕೆ ಮಠಗಳು ನೀಡಿದ ಸೇವೆ  ಅಪಾರ  ಜಗದ್ಗುರು  ರಂಭಾಪುರಿ  ಶ್ರೀಗಳು


ಬೈಲಹೊಂಗಲ 23 – ಸಮಾಜದ ಒಳಿತಿಗಾಗಿ ಭಕ್ತರ ಉದ್ಧಾರಕ್ಕಾಗಿ ಮಠಮಾನ್ಯಗಳು  ನೀಡುತ್ತಿರುವ ಸೇವೆ ಅಪಾರವಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀ 1008 ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು. ರಾಮದುರ್ಗ ತಾಲೂಕಿನ ಕಟಕೋಳ ಎಂ ಚಂದರಗಿ ಸಂಸ್ಥಾನ ಹಿರೇಮಠದಲ್ಲಿ ಗುರುವಾರ ಜರುಗಿದ ಜಗದ್ಗುರು ರೇಣುಕಾಚಾರ್ಯ ನೂತನ ಕಟ್ಟಡವನ್ನು ಉದ್ಘಾಟಿಸಿ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಭಕ್ತರಿಗೆ ಶಿವದೀಕ್ಷೆ ಸಂಸ್ಕಾರ ನೀಡಿ ಧರ್ಮದ ಜಾಗೃತಿ ಮೂಡಿಸಿ ಅವರನ್ನು ಸನ್ಮಾರ್ಗದ ತರುವ ಚಂದರಗಿ  ಮಠದ ಶ್ರೀಗಳ ಕಾರ್ಯವನ್ನು ಸರಿಯಾಗಿ ಪ್ರತಿಯೊಬ್ಬರೂ ಧರ್ಮವಂತರಾಗಿ ಸಂಸ್ಕಾರದಿಂದ ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ನುಡಿದರು.           ಪವಿತ್ರವಾದ ಧರ್ಮದಲ್ಲಿ ರಾಜಕೀಯ ಬೇಡ ರಾಜಕಾರಣದಲ್ಲಿ ಧರ್ಮ ವಿರಬೇಕು,  ಸಮಾಜದ ಒಳಿತಿಗಾಗಿ ಮಠಗಳು ಸಲ್ಲಿಸುತ್ತಿರುವ ಸೇವೆ ಅನನ್ಯವಾಗಿದ್ದು ಎಲ್ಲರೂ ಧರ್ಮ ಸಂಸ್ಕಾರದಿಂದ ನಡೆದು ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಜೀವನದಲ್ಲಿ ಮುಖ್ಯವಾದ ಬೇಕೆಂದು ರಂಭಾಪುರಿ ಜಗದ್ಗುರುಗಳು ಹೇಳಿದರು.

ವಿಧಾನ ಪರಿಷತ್ ಉಪಸಭಾಪತಿ ಆನಂದ ಮಾಮನಿ,  ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ, ಬೈಲಹೊಂಗಲ  ಶಾಸಕ ಮಹಾಂತೇಶ ಕೌಜಲಗಿ ಅವರು ಮಾತನಾಡಿ ಸಮಾಜದಲ್ಲಿ ಆಗುವ ತಪ್ಪುಗಳನ್ನು ತಿದ್ದಿ ಭಕ್ತರನ್ನು ಉದ್ದಾರ ಮಾಡುತ್ತಿರುವ ಜಗದ್ಗುರುಗಳ ಕಾರ್ಯವನ್ನು ಶ್ಲಾಘಿಸಿದರು.

ನೇತೃತ್ವ ವಹಿಸಿದ್ದ ಚಂದ್ರರಗಿ  ಮಠದ ಪೂಜ್ಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ  ಗೊಡಚಿ  ಕ್ಷೇತ್ರದಲ್ಲಿ ಜಗದ್ಗುರು ಪೀಠದಿಂದ ಗುರುಕುಲ ಹಾಗೂ ಸಭಾಭವನ ನಿರ್ಮಾಣದ  ಕಾರ್ಯವಾಗಬೇಕು ಎಂದು ನುಡಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಾವೇರಿಯ ಡಾ. ಗುರುಪಾದಯ್ಯ ಸಾಲಿಮಠ ಹಾಗೂ ಕಟಕೊಳದ  ಟಿ ಪಿ ಮುನೋಳಿ ಅವರಿಗೆ ಜಗದ್ಗುರು  ರೇಣುಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಲವಾರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.   ಈ ಸಂದರ್ಭದಲ್ಲಿಅಶೋಕ ಪೂಜಾರಿ,  ಮುಕ್ತಾರ್ ಪಠಾಣ ಮೋಹನ ಪಾಟೀಲ ಹಾಗೂ ನಾಡಿನ ವಿವಿಧ ಪೂಜ್ಯರು, ಗಣ್ಯರು, ಹಿರಿಯರು, ಸದ್ಭಕ್ತರು ಉಪಸ್ಥಿತರಿದ್ದರು.


Leave a Reply