Belagavi

ಸಹಕಾರಿ  ಧುರೀಣ  ಮನೋಳಿಗೆ ಸನ್ಮಾನ


ಬೈಲಹೊಂಗಲ 23 – ರಾಮದುರ್ಗ ತಾಲೂಕಿನ ಕಟಕೋಳದ ಗಣ್ಯ ಮನೆತನದ  ಹಿರಿಯ ಸಹಕಾರಿ ಧುರೀಣ ಶರಣ ಜೀವಿ ಟಿ ಪಿ ಮನೋಳಿ ಅವರನ್ನು ಕೇಂದ್ರ ಬಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.        ಎಂ  ಚಂದರಗಿ ಗ್ರಾಮದ ಸಂಸ್ಥಾನ ಹಿರೇಮಠದಲ್ಲಿ ಗುರುವಾರ ಜರುಗಿದ ಜಗದ್ಗುರು ರೇಣುಕಾದಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸಹಕಾರಿ  ಧುರೀಣ  ತಿಪ್ಪಣ್ಣ ಪರಪ್ಪ ಮನೋಳಿ ಅವರಿಗ 75 ನೇ  ವರ್ಷದ ಹುಟ್ಟುಹಬ್ಬ ಹಾಗೂ ಅವರಿಗೆ ಶ್ರೀಮಠದಿಂದ ನೀಡಲಾಗುವ ಜಗದ್ಗುರು ಶ್ರೀ ರೇಣುಕ ಶ್ರೀ ಪ್ರಶಸ್ತಿ ಪ್ರಧಾನ ಈ ಸಂದರ್ಭದಲ್ಲಿ ಕೇಂದ್ರ ಬಸವ ಸಮಿತಿ ವತಿಯಿಂದ ಸಮಿತಿಯ ಕಾರ್ಯಕಾರಿ ಸದಸ್ಯ ಮೋಹನ ಬಸನಗೌಡ ಪಾಟೀಲ ಅವರು ಮನೋಳಿ  ದಂಪತಿಗಳನ್ನು ಸನ್ಮಾನಿಸಿ ಪ್ರಪಂಚದ ಬೆಳಕು ಹಾಗೂ ನೆನಪಿರಲಿ ಪ್ರಾತಿನಿಧಿಕ ಕವನ ಸಂಕಲನ ಕೃತಿಗಳನ್ನು ಅರ್ಪಿಸಿದರು.       ಶಾಂತಮ್ಮ ಮನೋಳಿ, ಪತ್ರಕರ್ತ ಮಹಾಂತೇಶ ರೇಶ್ಮಿ  ಸೇರಿದಂತೆ ಅನೇಕ ಗಣ್ಯರು, ಪೂಜ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 


Leave a Reply