karanataka

ಕನ್ನಡದ ಹಿರಿಯ ನಟಿ ಜಯಂತಿ ಇನ್ನಿಲ್ಲ ಒಟ್ಟು ಆರು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಜಯಂತಿ


ಬೆಂಗಳೂರು – ಖ್ಯಾತ ಬಹುಭಾಷಾ ನಟಿ ಜಯಂತಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಕನ್ನಡದ 180 ಚಿತ್ರ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಜಯಂತಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು.

ಬಳ್ಳಾರಿಯಲ್ಲಿ 1945ರಲ್ಲಿ ಜನಿಸಿದ್ದ ಅವರು ಕನ್ನಡ ಚಿತ್ರರಂಗವಷ್ಟೇ ಅಲ್ಲ, ಬಹುತೇಕ ಎಲ್ಲ ಭಾಷೆಗಳ ಚಿತ್ರರಂಗಕ್ಕೂ ಅಮೂಲ್ಯ ಕೊಡುಗೆ ನೀಡಿದ್ದರು.

ಆದರೆ ಯಾವುದೇ ಪ್ರಮುಖ ಪ್ರಶಸ್ತಿ ಅವರಿಗೆ ಸಿಗದಿರುವುದು ಬೇಸರದ ಸಂಗತಿ.
೧೯೬೮ರಲ್ಲಿ ತೆರೆ ಕಂಡ ವೈ.ಅರ್.ಸ್ವಾಮಿ ನಿರ್ದೇಶನದ “ಜೇನು ಗೂಡು ” ಚಿತ್ರದ ಮೂಲಕ ಚಿತ್ರ ರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು”ಕಮಲ ಕುಮಾರಿ.

ಅದಕ್ಕಿಂತ ಮುನ್ನ “ಜಗದೇಕ ವೀರನ ಕಥೆ “ಚಿತ್ರದಲ್ಲಿ ಸಣ್ಣ ಪಾತ್ರ ವೊಂದರಲ್ಲಿ ಅಭಿನಯಿಸಿದ್ದಾರೆ.

ಒಟ್ಟು ಆರು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದ ೧೯೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ನಿರ್ಮಾಪಕಿಯೂ ನಿರ್ದೇಶಕಿಯೂ ಆಗಿರುವ ಇವರು ೧೯೬೫ರ “ಮಿಸ್ ಲೀಲಾವತಿ” ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ.

” ಎರಡು ಮುಖ”(೧೯೬೯),ಮನಸ್ಸಿನಂತೆ ಮಾಂಗಲ್ಯ”(೧೯೭೬),”ಧರ್ಮ ದಾರಿ ತಪ್ಪಿತು”(೧೯೮೧),ಮಸಣದ ಹೂವು (೧೯೮೫),”ಆನಂದ್ “(೧೯೮೬) ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿಯವರು ಕಾಮತೃಷೆಯಿಂದ ಬಳಲುವ ಹೆಣ್ಣಾಗಿ ಮೊದಲ ಭಾರಿಗೆ ವಿಶಿಷ್ಟ ಅಭಿನಯ ನೀಡಿದ್ದಾರೆ.


Leave a Reply