karanataka

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದಾರೆ


ಬೆಂಗಳೂರು – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದಾರೆ.

2 ವರ್ಷದ ಸಾಧನಾ ಸಮಾವೇಶದಲ್ಲಿ ವಿದಾಯ ಭಾಷಣ ಮಾಡಿದ ಯಡಿಯೂರಪ್ಪ ಇಂದು 3 ಗಂಟೆಗೆ ರಾಜಭವನಕ್ಕೆ ತೆರಳಿ ರಾಜಿನಾಮೆ ನೀಡುವುದಾಗಿ ಘೋಷಿಸಿದರು.

ತಮ್ಮ ರಾಜಕೀಯ ಇತಿಹಾಸವನ್ನು ಮೆಲುಕು ಹಾಕಿದ ಅವರು ರಾಜಿನಾಮೆ ಪ್ರಕಟಿಸಿದರು.

ತಾವು ಶಿಕಾರಿಪುರದ ಪುರಸಭೆ ಅಧ್ಯಕ್ಷನಾದಾಗಿನಿಂದ ಇಲ್ಲಿನವರೆಗಿನ ನಡೆಯನ್ನು ಮೆಲುಕು ಹಾಕುತ್ತ ಕಣ್ಣೀರು ಹಾಕಿದ ಯಡಿಯೂರಪ್ಪ, ಭಾಲನಾತ್ಮಕ ಭಾಷಣ ಮಾಡಿ ಅಂತಿಮವಾಗಿ ರಾಜಿನಾಮೆ ಪ್ರಕಟಿಸಿದರು.

ಸಿಎಂ ರಾಜೀನಾಮೆ ಬೆನ್ನಲ್ಲ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರ ಜೊತೆ ಮಾತಕತೆ ನಡೆಸಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಬರುತ್ತಿದ್ದಂತೆ ವಿಶ್ವೇಶ್ವರ ಹೆಗಡೆ ರಾಜಭವನಕ್ಕೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.

11 ಗಂಟೆ ಹೊತ್ತಿಗೆ ಕಾಗೇರಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಗೆಹ್ಲೋಟ್ ಜೊತೆ ಚರ್ಚಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರೂ ಕೇಳಿ ಬಂದಿರುವುದು ಇಲ್ಲಿ ಕುತೂಹಲ ಮೂಡಿಸಿದೆ.


Leave a Reply