Belagavi

ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ


ಬೈಲಹೊಂಗಲ 26:- ಇಲ್ಲಿಯ ರೋಟರಿ ಕ್ಲಬ್ ನ  ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭ ಜರುಗಿತು.

ಪಟ್ಟಣದ ಶಿವಬಸವ  ಕಲ್ಯಾಣ ಮಂಟಪದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಬೆಳಗಾವಿಯ ವೆಂಕಟೇಶ  ದೇಶಪಾಂಡೆಯವರು ನೂತನ  ಪದಾಧಿಕಾರಿಗಳಿಗೆ ರೋಟರಿ ಪದಕ ನೀಡಿ ಅಧಿಕಾರ ನೀಡಿದರು. ಕ್ಲಬ್ ನ ನೂತನ ಅಧ್ಯಕ್ಷರಾಗಿ ಮಹೇಶ ಬೆಲ್ಲದ,  ಕಾರ್ಯದರ್ಶಿಯಾಗಿ ಡಾ. ಮಹಾಂತೇಶ ಕಳ್ಳಿಬಡ್ಡಿ ಅವರು  ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯಾದರು.

ವಿಜಯ ಬೆಹರೆ,  ಪ್ರಕಾಶ ಮಿರ್ಜಿ  ಅತಿಥಿಗಳಾಗಿ ಆಗಮಿಸಿ ಮಾತನಾಡಿ ರೋಟರಿ ಸಂಸ್ಥೆಯು ನಾಡಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು ಎಲ್ಲರ ಪ್ರೀತಿಗೆ ಪಾತ್ರರಾಗಿದೆ, ನೀವು ಕೂಡಾ ಪಟ್ಟಣದಲ್ಲಿ  ಉತ್ತಮ ಕಾರ್ಯಗಳನ್ನು ಮಾಡಬೇಕೆಂದು  ನುಡಿದರು.

ಡಾ. ಬಸವರಾಜ ಮಹಾಂತಶೆಟ್ಟಿ ಮಾತನಾಡಿ  ಸಂಸ್ಥೆ ನಗರದಲ್ಲಿ ಪ್ರಾರಂಭವಾಗಿ ಸುಮಾರು 20 ವರ್ಷಗಳಿಂದ ಉತ್ತಮ ಸಮಾಜಮುಖಿ ಕಾರ್ಯಗಳನ್ನು ರೋಟರಿ ಸಂಸ್ಥೆ ಮಾಡಿದೆ ಎಂದು ನುಡಿದರು.

ಡಾ. ಮಹಾಂತೇಶ ಗದಗ ಸ್ವಾಗತಿಸಿದರು, ಭಾರತಿ ತಟವಾಟಿ ವಂದಿಸಿದರು. ಸುರೇಶ ಉಡಪಿ ಹಾಗೂ ಸವಿತಾ ಉಡಪಿ ನಿರೂಪಿಸಿದರು, ಇದೇ  ಸಂದರ್ಭದಲ್ಲಿ ಇನ್ನರವಿಲ್ ಕ್ಲಬನ ನೂತನ  ಪದಾಧಿಕಾರಿಗಳನ್ನು ಆಯ್ಕೆ ಪದಗ್ರಹಣ ಮಾಡಲಾಯಿತು. ಉಷಾ ಬೆಲ್ಲದ  ಅಧ್ಯಕ್ಷರಾಗಿ ಹಾಗೂ ರಾಜಶ್ರೀ  ಕುಲಕರ್ಣಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಎಲ್ಲ  ಪದಾಧಿಕಾರಿಗಳು ಉಪಸ್ಥಿತರಿದ್ದರು.

 


Leave a Reply